* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್‌ನ ಪೊಹಾರ್ದೇವಿಯಲ್ಲಿ ಬಂಜಾರ ವಿರಾಸತ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು.* ಈ ವಸ್ತು ಸಂಗ್ರಾಲಯವು ನಾಲ್ಕು ಅಂತಸ್ತಿನ ರಚನೆ, ಬಂಜಾರ ಸಮುದಾಯ ಮತ್ತು ಅದರ ನಾಯಕರ ಪರಂಪರೆಯನ್ನು ಪ್ರದರ್ಶಿಸುವ 13 ಗ್ಯಾಲರಿಗಳನ್ನು ಹೊಂದಿದೆ.* ಸಮುದಾಯದ ಆಧ್ಯಾತ್ಮಿಕ ಪ್ರತಿಮೆಗಳಾದ ಸಂತ ಸೇವಾಲಾಲ್ ಮಹಾರಾಜ್ ಮತ್ತು ಸಂತ ರಾಮರಾವ್ ಮಹಾರಾಜ್ ಅವರಿಗೆ ಮೋದಿ ಪುಷ್ಪ ನಮನ ಸಲ್ಲಿಸಿದರು.* ವಸ್ತುಸಂಗ್ರಹಾಲಯವು ಬಂಜಾರ ಸಮುದಾಯದ ಇತಿಹಾಸವನ್ನು ಸಾರುತ್ತದೆ. ಮತ್ತು ಅದರ ನಾಯಕರು ಮತ್ತು ಪ್ರಮುಖ ಚಳುವಳಿಗಳ ಭಾವಚಿತ್ರಗಳನ್ನು ಒಳಗೊಂಡಿದೆ.* ಸಾಂಸ್ಕೃತಿಕ ಆಚರಣೆಗಳ ಜೊತೆಗೆ ಗ್ರಾಮೀಣಾಭಿವೃದ್ಧಿಗೆ ಬದ್ಧತೆಯನ್ನು ಪ್ರತಿಬಿಂಬಿಸುವ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಪ್ರಧಾನಿ ಪ್ರಾರಂಭಿಸಲಿದ್ದಾರೆ.