* 8ರಿಂದ 18ರವರೆಗೆ ಭಾರತದ ಆತಿಥ್ಯದಲ್ಲಿ ಮಲಬಾರ್ ಸಮರಾಭ್ಯಾಸ ನಡೆಯಲಿದೆ. ಈ ಸಮರಾಭ್ಯಾಸದಲ್ಲಿ ಭಾರತದ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ನ ನೌಕಾಡೆಗಳು ಪಾಲ್ಗೊಳ್ಳಲಿವೆ.* 'ಮಲಬಾರ್ ಸಮಾರಾಭ್ಯಾಸ 2024 ಅಕ್ಟೋಬರ್ 8ರಿಂದ 18ರವರೆಗೆ ನಿಗದಿಯಾಗಿದ್ದು, ವಿಶಾಖ ಪಟ್ಟಣಂ ಬಂದರು ಪ್ರದೇಶದಿಂದ ಆರಂಭವಾಗಲಿದೆ' ಎಂದು ಭಾರತೀಯ ನೌಕಾಪಡೆ ತಿಳಿಸಿದೆ.* ಆಸ್ಟ್ರೇಲಿಯಾವು ಈ ಅಭ್ಯಾಸಕ್ಕಾಗಿ ತನ್ನ ಎಚ್ ಎಂಎಎಸ್ ಸ್ಟುವರ್ಟ್ ಹಾಗೂ ಎಂಎಚ್-60ಆರ್ ಸೀಹಾಕ್ ಹೆಲಿಕಾಪ್ಟರನ್ನು ಕಳುಹಿಸಿದೆ. ಮಲಬಾರ್ ಸಮರಾಭ್ಯಾಸದ ಈ 28ನೇ ಆವೃತ್ತಿಯಲ್ಲಿ ಭಾಗಿಯಾಗುವ ದೇಶಗಳ ವಿಶೇಷ ಪಡೆಗಳು ಕೂಡ ಅಭ್ಯಾಸ ನಡೆಸಲಿವೆ.* ಭಾರತ ಮತ್ತು ಅಮೆರಿಕ ನೌಕಾಪಡೆಗಳ ದ್ವಿಪಕ್ಷೀಯ ತಾಲೀಮಿನ ಭಾಗವಾಗಿ ಮಲಬಾರ್ ಸಮಾರಾಭ್ಯಾಸ 1992ರಲ್ಲಿ ಆರಂಭವಾಯಿತು. ನಂತರದ ವರ್ಷಗಳಲ್ಲಿ, ಪರಸ್ಪರ ಕಾರ್ಯಕ್ಷಮತೆ, ಪ್ರೋತ್ಸಾಹ ಮತ್ತು ಹಿಂದೂ ಮಹಾಸಾಗರ, ಪೆಸಿಫಿಕ್ ಪ್ರದೇಶದಲ್ಲಿ ಎದುರಾಗುವ ಸಾಗರೋತ್ತರ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಇನ್ನಷ್ಟು ರಾಷ್ಟ್ರಗಳನ್ನು ಒಳಗೊಂಡ ಕಾರ್ಯಕ್ರಮವಾಗಿ ಬದಲಾಯಿತು. ಜಪಾನ್ 2007ರಲ್ಲಿ ಹಾಗೂ ಆಸ್ಟ್ರೇಲಿಯಾ 2020ರಲ್ಲಿ ಈ  ಸಮರಾಭ್ಯಾಸದಲ್ಲಿ ಪಾಲ್ಗೊಂಡವು.