* ರಾಷ್ಟ್ರಪತಿ ಭವನದಲ್ಲಿನ ʼದರ್ಬಾರ್ ಹಾಲ್’ ಅನ್ನು 'ಗಣತಂತ್ರ ಮಂಟಪ' ಎಂದು ಹಾಗೂ ‘ಅಶೋಕ ಹಾಲ್’ ಅನ್ನು 'ಅಶೋಕ ಮಂಟಪ' ಎಂದು ಜುಲೈ 25 ರಂದು ಮರುನಾಮಕರಣ ಮಾಡಲಾಗಿದೆ.* ರಾಷ್ಟ್ರಪತಿ ಭವನದಲ್ಲಿ ಭಾರತೀಯ ಸಂಸ್ಕೃತಿಯ ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕತೆಯನ್ನು ಪಸರಿಸುವ ನಿರಂತರ ವಾತಾವರಣವನ್ನು ನಿರ್ಮಿಸುವ ಪ್ರಯತ್ನ ಇದಾಗಿದೆ ಎಂದು ರಾಷ್ಟ್ರಪತಿ ಭವನದ ತಿಳಿಸಿದೆ.* ‘ಗಣತಂತ್ರ’ ಪರಿಕಲ್ಪನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿದೆ. ‘ಗಣತಂತ್ರ ಮಂಟಪ’ ಈ ಸ್ಥಳಕ್ಕೆ ಸೂಕ್ತ ಹೆಸರಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.* “ಅಶೋಕ” ಎಂಬ ಪದವು ‘ಎಲ್ಲಾ ದುಃಖಗಳಿಂದ ಮುಕ್ತ’ ಅಥವಾ ‘ಯಾವುದೇ ದುಃಖದಿಂದ ದೂರವಿರುವ’ ವ್ಯಕ್ತಿಯನ್ನು ಸೂಚಿಸುತ್ತದೆ” ಎಂದು ಹೇಳಿಕೆ ತಿಳಿಸಿದೆ. ಅಲ್ಲದೆ ‘ಅಶೋಕ’ ಚಕ್ರವರ್ತಿ ಅಶೋಕನನ್ನು ಸೂಚಿಸುತ್ತದೆ, ಇದು ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ ಎಂದು ತಿಳಿಸಿದೆ.* ದರ್ಬಾರ್ ಹಾಲ್ ಅನ್ನು ಹಿಂದೆ ಸಿಂಹಾಸನ ಕೊಠಡಿ ಎಂದು ಕರೆಯಲಾಗುತ್ತಿತ್ತು, ಅಲ್ಲಿ ಪಂಡಿತ್ ಜವಾಹರಲಾಲ್ ನೆಹರು ಅವರ ನೇತೃತ್ವದ ಸ್ವತಂತ್ರ ಭಾರತದ ಮೊದಲ ಸರ್ಕಾರವು ಆಗಸ್ಟ್ 15, 1947 ರಂದು ಪ್ರಮಾಣ ವಚನ ಸ್ವೀಕರಿಸಿತು.