* 1999 ರಲ್ಲಿ ಮೇ 3 ರಿಂದ ಜುಲೈ 26ರ ವರೆಗೆ ಭಾರತ & ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ವಿಜಯದ ನೆನಪಿಗಾಗಿ ಭಾರತದಾದ್ಯಂತ ಪ್ರತಿವರ್ಷ ಜುಲೈ 26 ರಂದು " ಆಪರೇಷನ್ ವಿಜಯ " ದಿನವನ್ನಾಗಿ ಆಚರಿಸಲಾಗುತ್ತದೆ.*  ಪಾಕಿಸ್ತಾನದ ವಿರುದ್ಧದ ಕಾರ್ಗಿಲ್ ಯುದ್ಧವನ್ನು ಗೆದ್ದು ಇಂದಿಗೆ 25 ವರ್ಷ ಪೂರ್ಣಗೊಂಡಿದೆ.* ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಾಚರಣೆ ನಡಿಸಿ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ.* ಕಾರ್ಗಿಲ್  ಯುದ್ಧವು 1999 ರ ಮೇ-ಜೂನ್ ನಡುವೆ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಹೋರಾಡಲ್ಪಟ್ಟಿತು, ಇದರಲ್ಲಿ ಭಾರತವು ವಿಜಯವನ್ನು ಪಡೆಯಿತು. ಆದ್ದರಿಂದ ಈ ದಿನವನ್ನು ಭಾರತೀಯ ಸೈನಿಕರ ವಿಜಯಕ್ಕಾಗಿ ಸಮರ್ಪಿಸಲಾಗಿದೆ. * ಕಾರ್ಗಿಲ್ ವಿಜಯದ ರಜತ ಮಹೋತ್ಸವದ ಸ್ಮರಣಾರ್ಥವಾಗಿ ಭಾರತೀಯ ವಾಯುಪಡೆಯು ಜುಲೈ 12 ರಿಂದ 26 ರ ವರೆಗೆ ಸರ್ಸಾದ ವಾಯುನೆಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ರಜತ ಜಯಂತಿಯನ್ನು ಆಚರಿಸಿದೆ.* ಭಾರತದ ಪರವಾಗಿ ಕೆಚ್ಚೆ ದೆಯ ಹೋರಾಟ ಪ್ರದರ್ಶಿಸಿದ ಸಂಜಯ್ ಕುಮಾ‌ರ್, ನಯಿಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾ.ಮನೋಜ್‌ಕುಮಾರ್ ಪಾಂಡೆ, ಕ್ಯಾ.ವಿಕ್ರಮ್ ಬಾತ್ರಾ ಅವರಿಗೆ ಭಾರತ ಸರಕಾರ ಪರಮವೀರ ಚಕ್ರ ಪುರಸ್ಕಾರ ನೀಡಿತು.