Job Description: * ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯ (NTRO) ನೂತನ ಅಧ್ಯಕ್ಷರಾಗಿ ಅರುಣ್ ಸಿನ್ಹಾ ರವರನ್ನು ಕೇಂದ್ರ ಸರ್ಕಾರ ನೇಮಿಸಿದೆ. NTROದಲ್ಲಿ ಎರಡು ವರ್ಷಗಳ ಕಾಲ ಸಲಹೆಗಾರರಾಗಿ ಸೇವೆ ಸಲ್ಲಿಸಿರುವ ಸಿನ್ಹಾ, 1984ರ ಬ್ಯಾಚ್ ಕೇರಳ ಕೇಡರ್‌ಗೆ ಸೇರಿದವರು.* NTRO ಅಧ್ಯಕ್ಷ ಸ್ಥಾನವು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಖಾಲಿಯಾಗಿಇದ್ದು, ಸಿನ್ಹಾ ಅವರ ಈ ನೇಮಕಾತಿಯೊಂದಿಗೆ, ಗಡಿ ಭದ್ರತಾ ಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ ಮುಖ್ಯಸ್ಥರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಸರ್ಕಾರವು ತ್ವರಿತಗೊಳಿಸುವ ನಿರೀಕ್ಷೆಯಿದೆ.* ನ್ಯಾಶನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ (NTRO) 2004 ರಲ್ಲಿ ಸ್ಥಾಪನೆಯಾದ ಭಾರತದಲ್ಲಿನ ತಾಂತ್ರಿಕ ಗುಪ್ತಚರ ಸಂಸ್ಥೆಯಾಗಿದ್ದು, ಇದು ರಾಷ್ಟ್ರೀಯ ಭದ್ರತಾ ಸಲಹೆಗಾರರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಪ್ರಧಾನ ಮಂತ್ರಿ ಕಚೇರಿಗೆ (PMO) ವರದಿ ಮಾಡುತ್ತದೆ. * ಇಂಟೆಲಿಜೆನ್ಸ್ ಬ್ಯೂರೋ, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್, ಮತ್ತು ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ ಸೇರಿದಂತೆ ಭಾರತ ಸರ್ಕಾರದ ವಿವಿಧ ಏಜೆನ್ಸಿಗಳಿಗೆ ತಾಂತ್ರಿಕ ಬುದ್ಧಿಮತ್ತೆಯನ್ನು ಒದಗಿಸುವ ಜವಾಬ್ದಾರಿಯನ್ನು ಸಂಸ್ಥೆ ಹೊಂದಿದೆ.