Job Description: * ಏಪ್ರಿಲ್ 30 ರಂದು ಸಾರ್ವಜನಿಕರಿಗಾಗಿ ಪ್ರಧಾನಿ ನಡೆಸುತ್ತಿರುವ ಮನ್ ಕಿ ಬಾತ್ ನ 100ನೇ ಸಂಚಿಕೆ ಪೂರ್ಣಗೊಳ್ಳಲಿದೆ. ರೂಪಾಯಿ ವಿಶೇಷ ಹೊಸ ನಾಣ್ಯ ಬಿಡುಗಡೆ ಮಾಡಲಾಗುವುದು.* ಏಪ್ರಿಲ್ 30 ರಂದು ಪ್ರಧಾನಿಯವರ 'ಮನ್ ಕಿ ಬಾತ್' ನೂರನೇ ಆವೃತ್ತಿ ಸಮಾರಂಭ ನಡೆಯಲಿದ್ದು, ಅಮ್ಲ ಒಂದು ಲಕ್ಷ ಸ್ಥಳಗಳಲ್ಲಿ ಪ್ರಸಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 2010, 2011, 2012, 2014 ಮತ್ತು 2015 ರಲ್ಲಿ ಕೇಂದ್ರ ಸರ್ಕಾರ 100 ರೂಪಾಯಿ ಮುಖಬೆಲೆಯ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿದೆ.* 44 ಮಿಲಿ ಮೀಟರ್ ಸುತ್ತಳತೆಯ ವಿಶೇಷ ಕಾಯಿನ್ ಅನ್ನು ಬೆಳ್ಳಿ, ತಾಮ್ರ, ನಿಕ್ಕಲ್, ಸತುವಿನಿಂದ ಮಾಡಲಾಗಿದೆ. ಒಂದು ಬದಿ ಮೈಕ್ರೋಫೋನ್‌ ಚಿತ್ರ ಇದ್ದು, 35 ಗ್ರಾಂ ತೂಕ ಹೊಂದಿದೆ, ನಾಣ್ಯದ ಮುಂಭಾಗದಲ್ಲಿ ಅಶೋಕ ಸ್ತಂಭ ಮತ್ತು ಕೆಳಗೆ ಸತ್ಯಮೇವ ಜಯತ ಎನ್ನುವ ಪಾಕ್ಯ ಇರುತ್ತದೆ, ನಾಣ್ಯದ ಒಂದು ಬದಿಯಲ್ಲಿ 100 ಮುಖಬೆಲೆಯ ಗುರುತು ಇದೆ. ಮತ್ತೊಂದು ಬದಿಯಲ್ಲಿ 'ಮನ್ ಕಿ ಜಾಕ್ 100ನೇ ಸಂಚಿಕೆಯ ಸಂಕೇತವಿರುತ್ತದೆ.* 100 ರೂ. ಮುಖಬೆಲೆಯ ನಾಣ್ಯ ಧ್ವನಿ ತರಂಗಗಳಿರುವ ಮೈಕ್ರೋಫೋನ್ ಚಿತ್ರ ಮುದ್ರಿಸಲಾಗುವುದು. ಇದು ಚಲಾವಣೆಗೆ ಬರುತ್ತದೆಯೇ ಅಥವಾ ವಿಶೇಷ ಸಂಗ್ರಹಣೆಗೆ ಮಾತ್ರವೇ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.