Job Description: *71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಕಂದೀಲು’ ಚಿತ್ರವು ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದರೆ, ‘ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ ಬೆಸ್ಟ್ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.* ಮೈಸೂರಿನ ವೈದ್ಯ ಡಾ. ಚಿದಾನಂದ ಎಸ್‌. ನಾಯ್ಕ್‌ ನಿರ್ದೇಶನದ ‘ಸನ್ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ’ (ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು) ಕಿರುಚಿತ್ರ ಬೆಸ್ಟ್ ಸ್ಕ್ರಿಪ್ಟ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. * ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ಯಶೋದಾ ಪ್ರಕಾಶ್ ಕೊಟ್ಟುಕತ್ತೀರ ಅವರು ‘ಕಂದೀಲು’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ ಹಾಗೂ ಇವರು ಏಕೈಕ ಮಹಿಳಾ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. * ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ಪ್ರಶಸ್ತಿಗಳಾಗಿದ್ದು, 1954ರಿಂದ ಕೇಂದ್ರ ಸರ್ಕಾರವು ಪ್ರತಿವರ್ಷ ನೀಡುತ್ತಿದೆ. ಈ ಪ್ರಶಸ್ತಿಗಳ ಉದ್ದೇಶ ಭಾರತದ ವಿವಿಧ ಭಾಷೆಗಳ ಹಾಗೂ ಪ್ರಾದೇಶಿಕ ಚಿತ್ರಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು. * "ಕಂದೀಲು" ಚಿತ್ರದ ವಿಶೇಷತೆ: ಈ ಚಿತ್ರವು ಕನ್ನಡದ ಗ್ರಾಮೀಣ ಬದುಕಿನ ಹಾದಿ, ಸಮಾಜದ ನೈಜ ಸ್ಥಿತಿ ಮತ್ತು ಮನುಷ್ಯನ ಭಾವನೆಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದೆ. ಕಥಾವಸ್ತು, ಪಾತ್ರಗಳ ನೈಜ ನಿರೂಪಣೆ ಮತ್ತು ನಿರ್ದೇಶಕರ ಕಲಾತ್ಮಕ ದೃಷ್ಟಿಕೋನ ಈ ಚಿತ್ರವನ್ನು ಪ್ರಾದೇಶಿಕ ಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಟ್ಟದಲ್ಲೂ ಮೆರೆಯುವಂತೆ ಮಾಡಿದೆ. * ಪ್ರಶಸ್ತಿಯ ಮಹತ್ವ: ಕನ್ನಡ ಚಿತ್ರ ಕಂದೀಲುಗೆ ಸಿಕ್ಕಿರುವ ಈ ಪ್ರಶಸ್ತಿ, ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿಯೂ ಕಲೆ, ಕಥಾ ಶೈಲಿ ಮತ್ತು ಸಮಾಜಮುಖಿ ಸಂದೇಶಗಳ ಮಹತ್ವವನ್ನು ತೋರಿಸುತ್ತದೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ ಮತ್ತು ಹೆಮ್ಮೆ ದೊರಕಿದೆ. # 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು: ವಿಜೇತರ ಪಟ್ಟಿ ಚಲನಚಿತ್ರಗಳು: ವಿಶೇಷ ಉಲ್ಲೇಖಗಳು: ಎಂ.ಆರ್.ರಾಜಕೃಷ್ಣನ್ (Animal – Re-Recording) ಅತ್ಯುತ್ತಮ ತೈ ಫೇಕ್ ಚಿತ್ರ: ಪೈ ಟ್ಯಾಂಗ್… ಸ್ಟೆಪ್ ಆಫ್ ಹೋಪ್ ಅತ್ಯುತ್ತಮ ಗಾರೊ ಚಿತ್ರ: ರಿಮ್‌ಡೋಟಿಯಾಂಗಾ ತ್ಯುತ್ತಮ ತೆಲುಗು ಚಿತ್ರ: ಭಗವಂತ ಕೇಸರಿ ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್ ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ ಅತ್ಯುತ್ತಮ ಮಲಯಾಳಂ ಚಿತ್ರ: ಉಲ್ಲೋಜುಕ್ಕು ಅತ್ಯುತ್ತಮ ಕನ್ನಡ ಚಿತ್ರ: ಕಂದೀಲು ಅತ್ಯುತ್ತಮ ಹಿಂದಿ ಚಿತ್ರ: ಕಥಲ್ ಅತ್ಯುತ್ತಮ ಗುಜರಾತಿ ಚಿತ್ರ: ವಾಶ್ ಅತ್ಯುತ್ತಮ ಬೆಂಗಾಲಿ ಚಿತ್ರ: ಡೀಪ್ ಫ್ರಿಡ್ಜ್ ಅತ್ಯುತ್ತಮ ಅಸ್ಸಾಮಿ ಚಲನಚಿತ್ರ: ರೊಂಗಾಟಪು 1982 ಅತ್ಯುತ್ತಮ ಆಕ್ಷನ್ ನಿರ್ದೇಶನ: ನಂದು-ಪೃಧ್ವಿ (ಹನುಮಾನ್) ಅತ್ಯುತ್ತಮ ನೃತ್ಯ ಸಂಯೋಜನೆ: ವೈಭವಿ ಮರ್ಚೆಂಟ್ (ದಿಂಧೋರಾ ಬಜೆ ರೇ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ) ಅತ್ಯುತ್ತಮ ಸಾಹಿತ್ಯ: ಕಾಸರ್ಲ ಶ್ಯಾಮ್ (ಊರು ಪಲ್ಲೆತೂರು – ಬಳಗ) ಅತ್ಯುತ್ತಮ ಸಂಗೀತ ನಿರ್ದೇಶನ: ಜಿವಿ ಪ್ರಕಾಶ್ ಕುಮಾರ್ (ವಾತಿ), ಹರ್ಷವರ್ಧನ್ ರಾಮೇಶ್ವರ್ (ಪ್ರಾಣಿ)