* ರಾಜ್ಯದ ಮೊದಲ ತೇಲುವ ಕಾಂಕ್ರೀಟ್ ಜಟ್ಟಿಯನ್ನು ಸಾಗರಮಾಲಾ ಯೋಜನೆಯಡಿಯಲ್ಲಿ ಕಾಳಿನದಿ ಅರಬ್ಬಿ ಸಮುದ್ರ ಸೇರುವ ಸಂಗಮ ಪ್ರದೇಶ ಸದಾಶಿವಗಡ ಗುಡ್ಡದ ತಪ್ಪಲಿನ ಸಮೀಪ ಅಳವಡಿಸಲಾಗಿದೆ.* ಪ್ರವಾಸೋದ್ಯಮ ಉದ್ದೇಶಗಾಗಿ 12 ಮೀಟರ್ ಉದ್ದ ಮತ್ತು 3 ಮೀಟ‌ರ್ ಅಗಲದ ಬಂದರು ನಿರ್ಮಾಣವನ್ನು  ಇಲಾಖೆಯ ಮೂಲಕ ಮುಂಬೈ ಮೂಲದ ಮರೈನ್‌ಟೆಕ್ ಇಂಡಿಯಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಳವಡಿಸಿದೆ.* ತೇಲುವ ಕಾಂಕ್ರೀಟ್ ಜಟ್ಟಿಯನ್ನು 2.70 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ಜಟ್ಟಿಯನ್ನು ನೆರವೇರಿಸಲಾಗಿದ್ದು, ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ (ಐಡಬ್ಲ್ಯೂ ಎಐ) ಅಡಳಿತಾತ್ಮಕ ಅನುಮೋದನೆ ನೀಡಿದೆ.* ತೇಲುವ ಕಾಂಕ್ರೀಟ್ ಜಟ್ಟಿಯನ್ನು ಜಲಸಾಹಸ ಚಟುವಟಿಕೆ ಬೊಟ್, ಪ್ರವಾಸಿಗರನ್ನು ಕರೆದೊಯ್ಯುವ ಬೋಟುಗಳ ನಿಲುಗಡೆಗೆ ಜಟ್ಟಿಯನ್ನು ನಿರ್ಮಿಸಲಾಗಿದೆ ಎಂದು ಬಂದರು ಇಲಾಖೆಯ ಎಂಜಿನಿಯರ್ ಪಾಂಡುರಂಗ ಕುಲಕರ್ಣಿ ಅವರು ತಿಳಿಸಿದರು.