* ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 923 ಚದರ ಅಡಿ ವಿಸ್ತೀರ್ಣದಲ್ಲಿ ವೃತ್ತಾಕಾರದಲ್ಲಿ ನಿರ್ಮಾಣವಾದ ರಾಜ್ಯದ ಮೊದಲ ಕೃಷಿ ಮ್ಯೂಸಿಯಂ ಆ.3ರಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ಉದ್ಘಾಟನೆಗೊಳ್ಳಲಿದೆ.*  ಕೃಷಿ ಕುರಿತ ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ಶ್ರವಣ ಹಾಗೂ ದೃಶ್ಯ ಮಾದರಿಗಳ ಮೂಲಕ ಪಡೆಯಬಹುದಾದ ರಾಜ್ಯದ ಮೊದಲ “ಕೃಷಿ ಮ್ಯೂಸಿಯಂ” ಇದಾಗಿದೆ.* ಮ್ಯೂಸಿಯಂನಲ್ಲಿ ಕೃಷಿ ಕುರಿತ ಸಮಗ್ರ ಮಾಹಿತಿಯನ್ನು 5 ವಿಭಾಗಗಳಾಗಿ ವಿಂಗಡಿಸಲಾಗಿದೆ. 1) ಸುಂದರ ಟ್ಯಾಬ್ಬೋ ಆಕೃತಿ2) ಕೃಷಿ ತಲಿ- ಯಂತ್ರಜ್ಞಾನ 3) ಹೈನುಗಾರಿಕೆ ಮಾಹಿತಿ 4) ಆಕರ್ಷಕ ಪ್ರಾಂಗಣ 5) ಉಚಿತ ಪ್ರವೇಶ