* ಏಷ್ಯಾದಲ್ಲಿಯೇ ಇದೇ ಮೊದಲ ಬಾರಿಗೆ ಐದನೇ ವಿಶ್ವ ಕಾಫಿ ಸಮ್ಮೇಳನವನ್ನು (WCC) ಭಾರತವು ಸೆಪ್ಟೆಂಬರ್ 25 ರಿಂದ 28ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಿದೆ.* ಬೆಂಗಳೂರಿನಲ್ಲಿ ನಡೆದ ಡಬ್ಲ್ಯುಸಿಸಿ 2023ರ ಪೂರ್ವವೀಕ್ಷಣೆ ಸಮಾರಂಭದಲ್ಲಿ  'ವಿಶ್ವ ಕಾಫಿ ಸಮ್ಮೇಳನ' ಕಾರ್ಯಕ್ರಮದ ಲೋಗೋವನ್ನು ಜುಲೈ 31 ರಂದು (ಸೋಮವಾರ) ಅನಾವರಣಗೊಳಿಸಲಾಯಿತು. * ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಸಿಇಒ ಮತ್ತು ಕಾರ್ಯದರ್ಶಿ ಕೆ ಜಿ ಜಗದೀಶ  ಅವರು ಘೋಷಿಸಿದರು.