* ಭಾರತದ ಪ್ಯಾರಾ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಅವರು ಪ್ಯಾರಾಲಿಂಪಿಕ್ಸ್ 2024 ರ ಎಫ್ 64 ಫೈನಲ್‌ನಲ್ಲಿ 70.59 ಮೀ ಅತ್ಯುತ್ತಮ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. * ಸುಮಿತ್ ಆಂಟಿಲ್ ಅವರ ಈ ಥ್ರೋ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲೇ (ಎಫ್ 64 ವಿಭಾಗ) ಅತ್ಯುತ್ತಮ ಥ್ರೋ ಆಗಿದೆ. * ಶ್ರೀಲಂಕಾದ ದುಲಾನ್ ಕೊಡಿತುವಕ್ಕು 67.03 ಮೀಟರ್‌ ದೂರ ಎಸೆದು ಬೆಳ್ಳಿ ಪದಕ ಗೆದ್ದರೆ, ಮಿಚಲ್ ಬುರಿಯನ್ 64.89 ಮೀಟರ್‌ ದೂರ ಎಸೆದು ಕಂಚಿನ ಪದಕ ಪಡೆದರು. * ಭಾರತದ ಪದಕಗಳ ಸಂಖ್ಯೆ ಒಟ್ಟು 14ಕ್ಕೇರಿದೆ. ಇದಲ್ಲದೇ ಭಾರತ ಇದುವರೆಗೆ  3 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದಿದೆ.