* ದೇಶದ ವಿವಿಧೆಡೆಯ 10 ದಂಡು ಪ್ರದೇಶಗಳನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಭಾರತೀಯ ಸೇನೆ ನಿರ್ಧರಿಸಿದೆ.* ದಂಡು ಪ್ರದೇಶಗಳನ್ನು ಸ್ಥಳೀಯ ಆಡಳಿತದ ಜವಬ್ದಾರಿಗೆ ನೀಡಲು ಕೇಂದ್ರಸರ್ಕಾರ ತೀರ್ಮಾನಿಸಿದ್ದು, ಡೆಹ್ರಾಡೂನ್, ದೇವಲಾಲಿ, ನಾಸಿರಾಬಾದ್, ಬಿಬಿನಾ, ಅಜೇರ್, ರಾಮಗಢ, ಮಥುರಾ, ಶಹಜಹಾನ್‌ಪುರ, ಕೈಮೆಂಟ್ ಟೌನ್ ಹಾಗೂ ಫತೇಹಗಢದಲ್ಲಿರುವ ದಂಡುಪ್ರದೇಶಗಳನ್ನು ಹಸ್ತಾಂತರ ಮಾಡಲಾಗುತ್ತದೆ.* ಹಸ್ತಾಂತರಕ್ಕೆ ಅಗತ್ಯವಿರುವ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಸೇನೆಯ ಮೂರು ಕಮಾಂಡ್‌ಗಳು ಕಾರ್ಯಪ್ರವೃತ್ತವಾಗಿವೆ.* ಭಾರತೀಯ ಸೇನೆಯ ಸೆಂಟ್ರಲ್ ಕಮಾಂಡ್, ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಸದರ್ನ್ ಕಮಾಂಡ್ ಉತ್ತರಾಖಂಡ, ಮಹಾರಾಷ್ಟ್ರ, ರಾಜಸ್ಥಾನ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸಮನ್ವಯದಲ್ಲಿ ಹಸ್ತಾಂತರದ ವ್ಯಾಯಾಮವನ್ನು ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿದೆ.