* ಜುಲೈ 26ರಿಂದ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭಗೊಳ್ಳಲಿರುವ ಕ್ರೀಡಾಕೂಟದಲ್ಲಿ ನೀರಜ್‌ ಚೋಪ್ರಾ, ಪಿ.ವಿ.ಸಿಂಧು, ಕರ್ನಾಟಕದ ರೋಹನ್‌ ಬೋಪಣ್ಣ ಸೇರಿದಂತೆ ಭಾರತದ ಒಟ್ಟು 117 ಅಥ್ಲೀಟ್‌ಗಳು ಪಾಲ್ಗೊಳ್ಳುವುದಾಗಿ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಜುಲೈ 17 ರಂದು (ಬುಧವಾರ) ಮಾಹಿತಿ ನೀಡಿದೆ. ಇದರಲ್ಲಿ 70 ಪುರುಷರು, 47 ಮಹಿಳೆಯರಿದ್ದಾರೆ. * ಭಾರತದ 140 ಸಹಾಯಕ ಸಿಬ್ಬಂದಿ ಕೂಡಾ ಪ್ಯಾರಿಸ್‌ಗೆ ತೆರಳಲಿದ್ದಾರೆ. ಇದರಲ್ಲಿ ಕ್ರೀಡಾಕೂಟದಲ್ಲಿ ಭಾರತ ತಂಡದ ಮುಖ್ಯಸ್ಥರಾಗಿರುವ ಗಗನ್‌ ನಾರಂಗ್‌, 11 ಮಂದಿ ಐಒಎ ಅಧಿಕಾರಿಗಳು, 8 ವೈದ್ಯರ ತಂಡ, ಫಿಸಿಯೋಗಳು, ಕೋಚ್‌ಗಳು ಕೂಡಾ ಒಳಗೊಂಡಿದ್ದಾರೆ.* ಭಾರತ ಈ ಬಾರಿ ಒಲಿಂಪಿಕ್ಸ್‌ನ ಒಟ್ಟು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಈ ಪೈಕಿ ಅಥ್ಲೆಟಿಕ್ಸ್‌ನಲ್ಲಿ ಗರಿಷ್ಠ ಅಂದರೆ 29 ಮಂದಿ(18 ಪುರುಷ, 11 ಮಹಿಳೆಯರು) ಭಾರತವನ್ನು ಪ್ರತಿನಿಧಿಸಲಿದ್ದಾರೆ. * ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೊ ಚಾಕೊ ಕುರಿಯನ್‌, ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಫ್‌ನಲ್ಲಿ ಅದಿತಿ ಅಶೋಕ್‌, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್‌ ಹಾಗೂ ಧಿನಿಧಿ ದೇಸಿಂಘು ಸ್ಪರ್ಧಿಸಲಿದ್ದಾರೆ. ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್‌, ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ ಕಣದಲ್ಲಿದ್ದಾರೆ.* ಒಲಂಪಿಕ್ಸ್ ನ 5 ರಿಂಗ್ ಗಳ ಮಹತ್ವ : 5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್ ಗಳುಳ್ಳ ಒಲಿಂಪಿಕ್ಸ್ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್ ಪಿತಾಮಹ ಫ್ರಾನ್ಸ್‌ ಪಿಯರ್ ಡಿ ಕೌಬರ್ಟನ್ ಅವರು ವಿನ್ಯಾಸಗೊಳಿಸಿದರು. * ಒಲಿಂಪಿಕ್ಸ್ ಧ್ವಜ 1920ರ ಬೆಳ್ಳಿಯಂನ ಅಂಟ್ರಿರ್ಪ್‌ ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್ ನ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಈ ರಿಂಗ್‌ನ ವಿಶೇಷತೆಯಾಗಿದೆ.* ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟದ ಸ್ಪರ್ಧೆಯ ಪಟ್ಟಿಯಲ್ಲಿ ಒಟ್ಟು 32 ಕ್ರೀಡೆಗಳಿದ್ದು, ಒಟ್ಟು 5,084 ಪದಕಗಳು ವಿತರಣೆಯಾಗಲಿವೆ. ಇದರಲ್ಲಿ ಚಿನ್ನ, ಬೆಳ್ಳಿ ಕಂಚಿನ ಪದಕಗಳು ಸೇರಿಕೊಂಡಿವೆ. * ಫ್ರೆಂಚ್ ಮಿಂಟ್ ಮೊನ್ನೆ ಡಿ ಪ್ಯಾರಿಸ್ ಈ ಪದಕಗಳನ್ನು ಉತ್ಪಾದಿಸಿದೆ. ಪ್ಯಾರಿಸ್ ಮೂಲದ ಐಷಾರಾಮಿ ಆಭರಣ ಸಂಸ್ಥೆ ಚೌಮೆಟ್ ಪದಕಗಳನ್ನು ವಿನ್ಯಾಸ ಮಾಡಿದೆ. ಪದಕಗಳ ಹಿಂಭಾಗದಲ್ಲಿ 1896 ರಲ್ಲಿ ಮೊದಲ ಆಧುನಿಕ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದ ಪನಾಥೆನಿಕ್ ಕ್ರೀಡಾಂಗಣದೊಳಗೆ ಗ್ರೀಕ್ ವಿಜಯದ ದೇವತೆ ನೈಕ್ ಚಿತ್ರಿಸಲಾಗಿದೆ.* ಅಥ್ಲೆಟಿಕ್ಸ್ ತಂಡಕ್ಕೆ 17 ನೆರವು ಸಿಬ್ಬಂದಿ ಇದ್ದಾರೆ. ಉಳಿದಂತೆ ಕುಸ್ತಿ (12), ಬಾಕ್ಸಿಂಗ್ (11), ಹಾಕಿ (10), ಟೇಬಲ್ ಟೆನಿಸ್ (9), ಬ್ಯಾಡ್ಮಿಂಟನ್ (9), ಗಾಲ್ಫ್ (7), ಈಕ್ವೆಸ್ಟ್ರಿಯನ್ (5), ಆರ್ಚರಿ (4), ಸೇಲಿಂಗ್ (4), ವೇಟ್‌ಲಿಫ್ಟಿಂಗ್ (4), ಟೆನಿಸ್ (3), ಈಜು (2) ಮತ್ತು ಜುಡೊ (1) ಸಿಬ್ಬಂದಿ ಇದ್ದಾರೆ.* ಪ್ಯಾರಿಸ್ ಒಲಿಂಪಿಕ್ಸ್‌ 32 ಕ್ರೀಡೆಗಳು:ಆಕ್ವಾಟಿಕ್ಸ್ (ಈಜು, ಮ್ಯಾರಥಾನ್ ಈಜು, ಡೈವಿಂಗ್, ವಾಟರ್ ಪೋಲೊ, ಆರ್ಟಿಸ್ಟಿಕ್ ಈಜು), ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಬಾಕ್ಸಿಂಗ್, ಬ್ರೇಕಿಂಗ್, ಕ್ಯಾನೊ (ಕ್ಯಾನೊ ಸ್ಟಿಂಟ್, ಕ್ಯಾನೊ ಸ್ಟಾಲೋಮ್). ಸೈಕ್ಲಿಂಗ್ (ಬಿಎಮ್‌ಎಕ್ಸ್ ಫ್ರೀಸ್ಟೈಲ್, ಬಿಎಂಎಕ್ಸ್ ರೇಸಿಂಗ್, ರೋಡ್ ಸೈಕ್ಲಿಂಗ್, ಟ್ರ್ಯಾಕ್ ಸೈಕ್ಲಿಂಗ್), ಈಕ್ವೆಸ್ಟ್ರಿಯನ್ (ಈಕ್ವೆಸ್ಟ್ರಿಯನ್ ಇವೆಂಟಿಂಗ್, ಈಕ್ವೆಸ್ಟ್ರಿಯನ್ ಇವೆಂಟಿಂಗ್, ಈಕ್ವೆಸ್ಟ್ರಿಯನ್ ಡ್ರೆಸಿಂಗ್. ಈಕ್ವೆಸ್ಟ್ರಿಯನ್ ಜಂಪಿಂಗ್), ಫೆನ್ಸಿಂಗ್, ಫುಟ್‌ಬಾಲ್, ಗಾಲ್, ಜಿಮ್ನಾಸ್ಟಿಕ್ಸ್, ರಿಥಮಿಕ್ ಜಿಮಾಸಿಕ್), ಹ್ಯಾಂಡ್ ಬಾಲ, ಹಾಕಿ, ಜೂಡೊ, ಮಾಡರ್ನ್ ಪೆಂಟಾಥಾನ್, ರೋಯಿಂಗ್, ರಗಿ, ನೌಕಾಯಾನ, ಶೂಟಿಂಗ್, ಸ್ಕೇಟ್ ಬೋರ್ಡಿಂಗ್, ಸ್ಪೋರ್ಟ್ಸ್ ಕ್ಲೈಬಿಂಗ್, ಸರ್ಪಿಂಗ್, ಟೇಬಲ್ ಟೆನಿಸ್, ಟೆಕ್ವಂಡೂ, ಟೆನಿಸ್, ಟ್ರಯತ್ಲ್ಯಾನ್, ವಾಲಿಬಾಲ್ (ಬೀಚ್ ವಾಲಿಬಾಲ್, ವಾಲಿಬಾಲ್), ವೇಟ್ ಲಿಪ್ಟಿಂಗ್ ಮತ್ತು ಕುಸ್ತಿ.