* ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 2 ಕಂಚಿನ ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ಅವರು ಭಾನುವಾರ (ಆಗಸ್ಟ್ 11) ನಡೆಯಲಿರುವ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿರಲಿದ್ದಾರೆ. * 22 ವರ್ಷದ ಮನು 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಸರಬ್ಬೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕ ಗೆದ್ದಿದ್ದಾರೆ. * ಸದ್ಯ ಭಾರತ ಒಲಿಂಪಿಕ್ ಸಂಸ್ಥೆಯು ಮಹಿಳಾ ಧ್ವಜಧಾರಿಯನ್ನು ಮಾತ್ರ ಅಂತಿಮಗೊಳಿಸಿದ್ದು, ಶೀಘ್ರದಲ್ಲೇ ಮತ್ತೋರ್ವ ಪುರುಷ ಧ್ವಜಧಾರಿಯ ಹೆಸರು ಘೋಷಿಸುವ ನಿರೀಕ್ಷೆಯಲ್ಲಿದೆ. * ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ತಾರಾ ಶಟ್ಲರ್ ಪಿ.ವಿ.ಸಿಂಧು ಹಾಗೂ ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಭಾರತದ ಧ್ವಜ ಹಿಡಿದಿದ್ದರು.