* ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ / ನಿಂದ (ನ್ಯಾಕ್) ಕಾಲೇಜುಗಳಿಗೆ ಹಾಗೂ ವಿಶ್ವ ವಿದ್ಯಾಲಯಗಳಿಗೆ ನೀಡುತ್ತಿರುವ ಎ, ಬಿ, ಸಿ " ಮಾದರಿಯ ಗ್ರೇಡ್ ವ್ಯವಸ್ಥೆಯನ್ನು ಮುಂದಿನ ತಿಂಗಳಿಂದ (ಸೆಪ್ಟೆಂಬರ್‌) ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಕ್ ಸಂಸ್ಥೆಯ ನಿರ್ದೇಶಕ ಗಣೇಶನ್ ಕಣ್ಣಬೀರನ್ ಹೇಳಿದ್ದಾರೆ.* ನ್ಯಾಕ್ ಮಾನ್ಯತೆ ವ್ಯವಸ್ಥೆಯಲ್ಲಿ ಬದಲಾವಣೆ ಪ್ರಥಮ್ ಮತ್ತು ಸುಧಾರಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ನಗರದ ನ್ಯಾಕ್ ಕಚೇರಿಯಲ್ಲಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಗಣೇಶನ್ ಕಣ್ಣಬೀರನ್ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.* ಸಂಸ್ಥೆಗಳಿಗೆ ಗ್ರೇಡ್ ಬದಲು ನ್ಯಾಕ್ ಮಾನ್ಯತೆ ಹೊಂದಿವೆಯೇ, ಇಲ್ಲವೇ ಎಂಬಮಾಹಿತಿನೀಡಲಾಗುತ್ತದೆ. ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಬದಲು ತಂತ್ರಜ್ಞಾನ ಬಳಸಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. *  ಮೂಲಸೌಕರ್ಯ, ಬೋಧನೆ, ಗುಣಮಟ್ಟ ಮುಂತಾದ 'ಮಾನದಂಡ ಆಧರಿಸಿ ಹಾಲಿ ವ್ಯವಸ್ಥೆಯಲ್ಲಿ ಗ್ರೇಡ್ " ನೀಡಲಾಗುತ್ತಿದೆ. ಗ್ರೇಡ್ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ಇದ್ದವು ಆದರಿಂದ ಈ ಹೊಸ ಮಾರ್ಗಸೂಚಿಯನ್ನು ಮಾಡಲು ನಿರ್ಧರಿಸಲಾಗಿದೆ.