* ಪ್ರತಿಭಟನೆ, ಗಲಭೆಯ ವೇಳೆ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾದರೆ ಹಾನಿ ಮಾಡಿದವರಿಂದಲೇ ಸಂಪೂರ್ಣ ಹಣ ವಸೂಲಿ ಮಾಡುವ ಕಾನೂನನ್ನು ಉತ್ತರಾಖಂಡದಲ್ಲಿ ಜಾರಿ ಮಾಡಲಾಗಿದೆ.* ಉತ್ತರಾಖಂಡ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಷ್ಟ ವಸೂಲಿ ಮಸೂದೆಯನ್ನು ಕಳೆದ ತಿಂಗಳು ರಾಜ್ಯ ವಿಧಾನಸಭೆ ಅಂಗೀಕರಿಸಿತ್ತು. ಇದೀಗ ರಾಜ್ಯಪಾಲರ ಸಹಿ ಬೀಳುವುದರೊಂದಿಗೆ ಕಾನೂನು ಜಾರಿಯಾಗಿದೆ.* ಪ್ರತಿಭಟನೆ, ಧರಣಿ ನಡೆಸುವ ಸಮಯದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಅದಕ್ಕೆ ಹಾನಿ ಮಾಡಿದವರನ್ನೇ ಅಂದರೆ ಪ್ರತಿಭಟನೆಗೆ ಕರೆ ನೀಡಿದವರನ್ನೇ ಹೊಣೆ ಮಾಡಲಾಗುತ್ತದೆ.* ಇದಲ್ಲದೆ ಅವರಿಗೆ 8 ಲಕ್ಷ ರೂ. ದಂಡವನ್ನೂ ವಿಧಿಸಲಾಗುತ್ತದೆ. ಜತೆಗೆ ಗಲಭೆ ನಿಯಂತ್ರಣಕ್ಕೆಂದು ನಿಯೋಜನೆಯಾಗುವ ಸಿಬ್ಬಂದಿ ಖರ್ಚು ವೆಚ್ಚದ ಮೊತ್ತವನ್ನೂ ಅವರಿಂದಲೇ ವಸೂಲಿ ಮಾಡಲಾಗುತ್ತದೆ. “ಇದು ದೇಶದ ಅತ್ಯಂತ ಕಠಿಣ ಗಲಭೆ ನಿಗ್ರಹ ಕಾನೂನು’ ಎಂದು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ.