* ದೇಶದಲ್ಲಿ ಹೊಸ ಆರ್ಥಿಕ ಕ್ರಾಂತಿಯನ್ನೇ ಬರೆದಿರುವ ಯುಪಿಐ ಪಾವತಿ ಇದೀಗ ಹೊಸದೊಂದು ದಾಖಲೆ ನಿರ್ಮಿಸಿದ್ದು, ವಿತ್ತೀಯ ವರ್ಷ 2023-24ನೇ ಸಾಲಿನಲ್ಲಿ ದೇಶದಲ್ಲಿ ಯುಪಿಐ ಪಾವತಿಗಳ ಪ್ರಮಾಣ ಬರೊಬ್ಬರಿ ಶೇ.138ರಷ್ಟು ಏರಿಕೆಯಾಗಿದೆ.* ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, ವಿತ್ತೀಯ ವರ್ಷ 2017-18ರಲ್ಲಿ 1ಲಕ್ಷ ಕೋಟಿರೂ ಗಳಷ್ಟಿದ್ದ UPI ವಹಿವಾಟಿನ ಮೌಲ್ಯವು ವಿತ್ತೀಯ ವರ್ಷ 2023-24 ರಲ್ಲಿ ಶೇ.138 ರಷ್ಟು ಏರಿಕೆಯಾಗಿ 200 ಲಕ್ಷ ಕೋಟಿ ರೂಗೆ ಏರಿಕೆಯಾಗಿದೆ ಎಂದು CAGR ವರದಿಯಲ್ಲಿ ಉಲ್ಲೇಖಿಸಲಾಗಿದೆ.* ಪ್ರಸಕ್ತ ಹಣಕಾಸು ವರ್ಷದ 2024-25 ರ ಮೊದಲ ಐದು ತಿಂಗಳಲ್ಲಿ (ಏಪ್ರಿಲ್-ಆಗಸ್ಟ್) ಡಿಜಿಟಲ್ ಪಾವತಿಗಳ ಮೌಲ್ಯವು 1,669 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದ್ದು, ಇದೇ ಅವಧಿಯಲ್ಲಿ ಡಿಜಿಟಲ್ ಪಾವತಿಗಳ ವಹಿವಾಟಿನ ಪ್ರಮಾಣ 8,659 ಕೋಟಿ ತಲುಪಿದೆ.* ಯುಪಿಐ ವಹಿವಾಟಿನ ಮೌಲ್ಯವು 1 ಲಕ್ಷ ಕೋಟಿಯಿಂದ 200 ಲಕ್ಷ ಕೋಟಿಗೆ ಅಂದರೆ ಶೇ. 138ರಷ್ಟು ಬೆಳೆದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.* ಒಟ್ಟು ಡಿಜಿಟಲ್ ಪಾವತಿ ವಹಿವಾಟುಗಳ ಸಂಖ್ಯೆ 2017-18ರ FY ನಲ್ಲಿ 2,071 ಕೋಟಿಯಿಂದ FY 2023-24 ರಲ್ಲಿ 18,737 ಕೋಟಿಗೆ ಏರಿಕೆಯಾಗಿದೆ. * ಹಣಕಾಸು ವರ್ಷದ 2024-25 ರ ಆರಂಭಿಕ ಐದು ತಿಂಗಳೊಳಗೆ (ಏಪ್ರಿಲ್-ಆಗಸ್ಟ್) ₹1,669 ಲಕ್ಷ ಕೋಟಿಗೆ ತಲುಪಿದೆ. ಈ ಅವಧಿಯಲ್ಲಿ ವಹಿವಾಟಿನ ಪ್ರಮಾಣವೂ ಗಣನೀಯ ಏರಿಕೆ ಕಂಡಿದ್ದು, 8,659 ಕೋಟಿಗೆ ತಲುಪಿದೆ.* ವಹಿವಾಟಿನ ಮೌಲ್ಯವು 1,962 ಲಕ್ಷ ಕೋಟಿ ರೂಪಾಯಿಗಳಿಂದ 3,659 ಲಕ್ಷ ಕೋಟಿ ರೂಪಾಯಿಗಳಿಗೆ ಬೆಳೆದಿದೆ. ಪ್ರಸ್ತುತ ಯುಪಿಐ ಯುಎಇ, ಸಿಂಗಾಪುರ, ಭೂತಾನ್, ನೇಪಾಳ, ಶ್ರೀಲಂಕಾ, ಫ್ರಾನ್ಸ್ ಮತ್ತು ಮಾರಿಷಸ್‌ ನಂತಹ ಪ್ರಮುಖ ಮಾರುಕಟ್ಟೆಗಳನ್ನು ಒಳಗೊಂಡಂತೆ 7 ದೇಶಗಳಲ್ಲಿ ಭಾರತದ ಯುಪಿಐ ಪಾವತಿ ಜಾರಿಗೆ ಬಂದಿದೆ.