* ಕನಿಷ್ಕ್ ಬಿಸ್ವಾಸ ಅವರು ಬೆಂಗಳೂರಿನ ಜವಾಹರಲಾಲ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈನ್ಟಿಪಿಕ ರಿಸರ್ಚನಲ್ಲಿ ನ್ಯೂ ಕೆಮಿಸ್ಟ್ರಿ ಯೂನಿಟಿನಲ್ಲಿಅಸೋಸಿಯೇಟ್ ಪ್ರೊಫೆಸರ್ ಆಗಿದ್ದು,ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಪರಿಸರದ ಮೇಲೆ ಕೇಂದ್ರೀಕರಿಸಿದ ಸಂಶೋಧನಾ ಆಸಕ್ತಿಗಳನ್ನೂ ಹೊಂದಿದ್ದಾರೆ.* ಇವರಿಗೆ ಯುನೆಸ್ಕೊ ಟಿಡಬ್ಲ್ಯೂಎಸ್ಸಿಎಸ್ ಪ್ರಶಸ್ತಿ 2025 ರಲ್ಲಿ ಲಭಿಸಿದೆ.ಈ ಪ್ರಶಸ್ತಿಯನ್ನು ತ್ಯಾಜ್ಯ ಶಾಖವನ್ನು ವಿದ್ಯುತ ಆಗಿ ಪರಿವರ್ತಿಸುವ ಥರ್ಮೋಎಲೆಕ್ಟ್ರಿಕ ವಸ್ತುಗಳ ಆವಿಷಕಾರಕ್ಕಾಗಿ ಈ  ಗೌರವ ಸಂದಿದೆ.ಇದು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಿಗುವ ಮಹತ್ವದ ಪ್ರಶಸ್ತಿಯಾಗಿದೆ.ಈ ಗೌರವವನ್ನು ದಿ ವರ್ಲ್ಡ್ ಅಕಾಡೆಮಿ ಆಫ ಸೈನ್ಸ್ ಯುನೆಸ್ಕೊ ನೀಡಿದೆ.* ಇದಕ್ಕೂ ಮೊದಲು ,2021 ರಲ್ಲಿ ಅವರು ಭಾರತದ ಅತ್ಯಂತ ಪ್ರತಿಷ್ಠಿತ ವಿಜ್ಞಾನ ಗೌರವಗಳಲ್ಲಿ ಒಂದಾದ ರಸಾಯನ ವಿಜ್ಞಾನ ದಲ್ಲಿ ಶಾಂತಿ ಸ್ವರೂಪ ಭಟ್ನಾಗರ ಪ್ರಶಸ್ತಿಯನ್ನು ಪಡೆದಿದ್ದರು.* ಪ್ರೊ.ಬಿಸ್ವಾಸ್ ಅವರು ತ್ಯಾಜ್ಯ ಶಾಖವನ್ನು ಬಳಸಿಕೊಂಡು ಸ್ವಚ್ಛ ವಿದ್ಯುತ ಉತ್ಪಾದಿಸುವ ಅತ್ತುತ್ಯಮ ಥರ್ಮೋಎಲೆಕ್ಟ್ರಿಕ ವಸ್ತುಗಳ ಆವಿಷಕಾರ ಮತ್ತು ವಿನ್ಯಾಸ ಮಾಡಿದ್ದಾರೆ.* ಈ ವಾರ್ಷಿಕ ಪ್ರಶಸ್ತಿಯನ್ನು 2020 ರಲ್ಲಿ ಸ್ಥಾಪಿಸಲಾಯಿತು.ಈ ಪ್ರಶಸ್ತಿಯನ್ನು 10 ,000 ಡಾಲರ ನಗದು ಬಹುಮಾನವನ್ನು ಒಳಗೊಂಡಿದೆ.* ಈ ಪ್ರಶಸ್ತಿಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಜ್ಞಾನಿಗಳಿಗೆ ನೀಡಲಾಗುತ್ತದೆ.* ತ್ಯಾಜ್ಯ ಶಾಖವನ್ನು ಸೆರೆಹಿಡಿದು,ಅದನ್ನು ಉಪಯೋಗಕ್ಕೆ ಬರುವ ವಿದ್ಯುತ ಶಕ್ತಿಯಾಗಿ ಪರಿವರ್ತಿಸುವ ಹಲವಾರು ಸುಧಾರಿತ ವಸ್ತುಗಳು ಮತ್ತು ಪ್ರೋಟೋಟೈಪ ಸಾಧನಗಳನ್ನು ಅಭಿವೃದ್ಧಿಪಡಿಸಿದೆ.ಇವರು ಶಾಖವನ್ನು ನೇರವಾಗಿ ವಿದ್ಯುತ ಆಗಿ ಪರಿವರ್ತಿಸಬುದು ಎಂಬುದರ ಬಗ್ಗೆ ಅಧ್ಯಯನ ಮಾಡಿದ್ದಾರೆ.* ವಿಶ್ವದಾದಂತ್ಯ ಉತ್ಪತ್ತಿಯಾಗಿರುವ ಶಕ್ತಿಯು ಸುಮಾರು 65 % ನಷ್ಟು ಶಾಖದ ರೂಪದಲ್ಲಿ ವ್ಯರ್ಥವಾಗುತ್ತದೆ.ಇದು ಕೈಗಾರಿಕಾ ಬಟ್ಟಿ,ವಾಹನಗಳ ಹೊಗೆ ಮತ್ತು ಮನೆಗಳಲ್ಲಿನ ಉಪಕರಣಗಳಿಂದಲೂ  ಹೊರಬರುತ್ತದೆ.* ಥರ್ಮೋಎಲೆಕ್ಟ್ರಿಕಲ್ ವಸ್ತುಗಳು ಕಾರ್ಬನ್ ಮೊನಾಕ್ಸೈಡ್ ಅಥವಾ ಕಾರ್ಬನ್ ಡೈ ಆಕ್ಸೈಡ್ ನಂತಹ ಹಾನಿಕಾರಕ ಅನಿಲಗಳನ್ನು ಹೊರಸೂಸದೆ,ಶಾಖವನ್ನು ಉತ್ಪತ್ತಿ ಮಾಡುತ್ತದೆ.* ಬೆಂಗಳೂರಿನ ವಿಜ್ಞಾನ ಲೋಕಕ್ಕೆ ಹೆಮ್ಮೆಯ ವಿಷಯವಾಗಿದೆ.