* ಅಮೆರಿಕದ ಕೊಕೊ ಗಾಫ್‌ ಅವರು ಜೆಕ್‌ ಗಣರಾಣ್ಯದ ಕಟೆರಿನಾ ಸಿನಿಯಾಕೋವಾ ಅವರೊಂದಿಗೆ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚೊಚ್ಚಲ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಪಡೆದುಕೊಂಡರು.* ಸಿಂಗಲ್ಸ್‌ನಲ್ಲಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ಕೊಕೊ ಗಾಫ್‌ ಮತ್ತು ಕಟೆರಿನಾ ಸಿನಿಯಾಕೋವಾ ಅವರು ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮಿಯು ಕಾಟೊ ಮತ್ತು ನಾಡಿಯಾ ಕಿಚೆನೊಕ್ ವಿರುದ್ಧ 6-0, 6-2 ಸೆಟ್‌ಗಳಿಂದ ಗೆದ್ದರು.* ಕೊಕೊ ಗಾಫ್ ಅವರು ಮತ್ತು 28 ವರ್ಷದ ಕಟೆರಿನಾ ಜೋಡಿಯು ಜೂನ್ 09 ರಂದು (ಭಾನುವಾರ) ಫೈನಲ್ ಹಣಾಹಣಿಯಲ್ಲಿ 7-6 (5), 6-3 ಇಟಲಿಯ ಜಾಸ್ಮಿನ್ ಪಾವೀನಿ ಮತ್ತು ಸಾರಾ ಎರಾನಿ ಅವರನ್ನು ನೇರ ಸೇಟ್‌ಗಳಲ್ಲಿ ಮಣಿಸಿತು.* ಜೂನ್ 04 ರಂದು (ಮಂಗಳವಾರ) ನಡೆದ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಗೌಫ್ ಅವರು ಮೂರು ಸೆಟ್‌ಗಳಲ್ಲಿ ಓನ್ಸ್ ಜಬೇರ್ ಅವರನ್ನು ಸೋಲಿಸಿದರು.* ಅಮೇರಿಕಾದ ಕಟೆರಿನಾ ಅವರಿಗೆ ಮಹಿಳೆಯರ ಡಬಲ್ಸ್‌ ನಲ್ಲಿ ಇದು ಎಂಟನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ. ಈ ಹಿಂದಿನ ಕಟೆರಿನಾ ಅವರು ಏಳು ಪ್ರಶಸ್ತಿಗಳನ್ನು ಸ್ವದೇಶದ ಬಾರ್ಬೊರಾ ಕ್ರೆಚ್ಚಿಕೋವಾ ಅವರೊಂದಿಗೆ ಗೆದ್ದಿದ್ದಾರೆ.