* ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಹಾಗೂ ಬ್ರಿಟನ್ ನಲ್ಲಿ ಇರುವ ಭಾರತೀಯ ಹೈಕಮಿಷನ್ ಜಂಟಿಯಾಗಿ ಸಿದ್ಧಪಡಿಸಿರುವ ವರದಿಯ ಪ್ರಕಾರ ಬ್ರಿಟನ್ ಗೆ ಭಾರತದಿಂದ ವಿದೇಶಿ ನೇರ ಬಂಡವಾಳ ಹೂಡಿಕೆ (FDA) ತರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೆಹಲಿ ಮೂರನೆಯ ಸ್ಥಾನ ಪಡೆದಿದೆ. * ಇತ್ತೀಚಿಗೆ ಈ ವರದಿಯನ್ನು ಲಂಡನ್ ನಲ್ಲಿ ಬಿಡುಗಡೆ ಮಾಡಲಾಗಿದೆ.* ಭಾರತದಿಂದ ಬ್ರಿಟನ್ನಿಗೆ ಎಫ್‌ಡಿಐ ತರುವ - ಟಾಪ್-10 ರಾಜ್ಯಗಳ ಪಟ್ಟಿ : 1. ಮಹಾರಾಷ್ಟ್ರ (ಶೇ 20ರಷ್ಟು)2. ಕರ್ನಾಟಕದಲ್ಲಿ (ಶೇ 12ರಷ್ಟು)  3. ದೆಹಲಿಯ ಪಾಲು (ಶೇ 8.6ರಷ್ಟು)4. ಗುಜರಾತ್ (ಶೇ 7.1ರಷ್ಟು)5. ತಮಿಳುನಾಡು (ಶೇ 6.7ರಷ್ಟು) 6. ತೆಲಂಗಾಣ (ಶೇ 6.5ರಷ್ಟು) 7. ಉತ್ತರ ಪ್ರದೇಶ (ಶೇ 5.9ರಷ್ಟು)8. ಹರಿಯಾಣ (ಶೇ 4.5ರಷ್ಟು) 9. ಪಶ್ಚಿಮ ಬಂಗಾಳ (ಶೇ 3.14ರಷ್ಟು)10. ಕೇರಳ (ಶೇ 3.05ರಷ್ಟು)