* ಸತತ ಮೂರನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಜೂನ್ 09 ರಂದು (ಭಾನುವಾರ) ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  * ಜವಹರಲಾಲ್‌ ಅವರ ನಂತರ ನರೇಂದ್ರ ಮೋದಿ ಅವರು ಐತಿಹಾಸಿಕ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. * ರಾಷ್ಟ್ರಪತಿ ದೌಪದಿ ಮುರ್ಮು ಅವರು ಜೂನ್ 09 ರಂದು ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ನರೇಂದ್ರ ಮೋದಿಯವರಿಗೆ ಹಾಗೂ ಸಂಪುಟದ ಸದಸ್ಯರಿಗೆ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದ್ದರು.* ಈ ಕಾರ್ಯಕ್ರಮದಲ್ಲಿ ಎನ್ ಡಿಎ ಪಕ್ಷಗಳ ಮುಖಂಡರು, ವಿವಿಧ ವಿದೇಶಗಳ ಪ್ರಮುಖರು ಸೇರಿ ಒಟ್ಟು 9000 ಕ್ಕೂ ಅಧಿಕ ಅಥಿತಿಗಳು ಕಾಯಕ್ರಮದಲ್ಲಿ ಪಾಲ್ಗೊಂಡರು.* ಕರ್ನಾಟಕದಿಂದ ನಿರ್ಮಲ ಸೀತಾರಾಮನ್, ಹೆಚ್.ಡಿ ಕುಮಾರಸ್ವಾಮಿ, ಪ್ರಲ್ಹದ ಜೋಶಿ, ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ನೀಡಲಾಗಿದೆ.* ನರೇಂದ್ರ ಮೋದಿ ಅವರ 2,0 ಸರ್ಕಾರದಲ್ಲಿ ಕಾನೂನು, ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ನಿಭಾಯಿಸಿದ್ದ ಪ್ರಲ್ಹದ ಜೋಶಿ ಅವರು ಧಾರವಾಡ ಲೋಕಸಭೆ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿದ್ದಾರೆ.* 2014 ರಲ್ಲಿ 73 ಸ್ಥಾನ ಮತ್ತು 2019ರಲ್ಲಿ ರಲ್ಲಿ 64 ಸ್ಥಾನ ಗಳಿಸಿದ್ದಾಗಲೂ ಉತ್ತರಪ್ರದೇಶಕ್ಕೆ 9 ಸಚಿವ ಸ್ಥಾನ ನೀಡಲಾಗಿತ್ತು.* ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಮುಖರು : - ರನೀಲ್ ವಿಕ್ರಮ್ ಸಿಂಘ- ಶ್ರೀಲಂಕಾ ಅಧ್ಯಕ್ಷ- ಮೊಹಮ್ಮದ್ ಮುಝಿಜು- ಮಾಲೀಮ್ಸ್ ಪ್ರಧಾನಿ- ಶೇಖ್ ಹಸೀನಾ- ಬಾಂಗ್ಲಾದೇಶ ಪ್ರಧಾನಿ- ಪ್ಪೇರಿಂಗ್ ಟೊಗ್ಗೆ- ಭೂತಾನ್ ಪ್ರಧಾನಿ- ಕಮಲ್ ದಹಲ್ ಪ್ರಚಂಡ- ನೇಪಾಳ ಪ್ರಧಾನಿ- ಪ್ರವೀಂದ್‌ಕುಮಾ‌ರ್ ಜಗನಾತ್- ಮಾರಿಷಸ್ ಪ್ರಧಾನಿಪ್ರಧಾನಿ ಅಧಿಕಾರವಧಿ : ಮೊದಲ ಅಧಿಕಾರಾವಧಿ : 26 ಮೇ 2014ಎರಡನೇ ಅಧಿಕಾರಾವಧಿ : 30 ಮೇ 2019ಮೂರನೇ ಅಧಿಕಾರಾವಧಿ : 9 ಜೂನ್ 2024