* ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತು ಬ್ರೈಲ್‌ ಲಿಪಿಯಲ್ಲಿ ಬರೆಯಲಾದ '' ಎ ಪ್ರಾಮಿಸ್ಡ್ ನೇಷನ್ ಹಾನರೇಬಲ್‌ ಶ್ರೀ ನರೇಂದ್ರ ಮೋದಿ- ದಿ ಮೇಕರ್ ಆಫ್ ನ್ಯೂ ಇಂಡಿಯಾ" ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಡುಗಡೆ ಮಾಡಿದರು.* ವಿಜಯ ಸಂಕೇಶ್ವರ್‌ ಮಾಲೀಕತ್ವ ಮತ್ತು ಆನಂದ ಸಂಕೇಶ್ವರ್‌ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ವಿಆರ್‌ಎಲ್‌ ಲಾಜಿಸ್ಟಿಕ್ಸ್‌ ನಲ್ಲಿ ಈ ಪುಸ್ತಕ ಪ್ರಕಟವಾಗಿದೆ.* ಶ್ರೀ ಅಮಿತ್ ಶಾ ಅವರು ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮ್ಮ ನಾಗರಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ನೀತಿಗಳನ್ನು ಪುನರುಜ್ಜೀವನಗೊಳಿಸಿ ಹೊಸ ಭಾರತವನ್ನು ನಿರ್ಮಿಸಿದ್ದಾರೆ ಎಂದು ಹೇಳಿದ್ದಾರೆ.