* ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್ ದೇಶದ ಅತ್ಯುನ್ನತ ಗೌರವವಾದ 'ಆರ್ಡರ್ ಆಫ್ ದಿ ನೈಲ್' (Order of the Nile) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.* ಈಜಿಪ್ಟ್ ಅಧ್ಯಕ್ಷ ಅಬ್ದೆಲ್‌ ಫತ್ತಾಹ್ ಎಲ್‌-ಸಿಸಿ ಅವರು ಮೋದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ವಿವಿಧ ದೇಶಗಳಿಂದ ಸಂದ 13ನೇ ಅತ್ಯುನ್ನತ ಗೌರವ ಇದಾಗಿದೆ.* ಆರ್ಡರ್ ಆಫ್ ದಿ ನೈಲ್ ಅನ್ನು 1915 ರಲ್ಲಿ ಆರಂಭಿಸಲಾಗಿದ್ದು,1953 ರಲ್ಲಿ ರಾಜಪ್ರಭುತ್ವವನ್ನು ರದ್ದುಪಡಿಸುವವರೆಗೂ ಈಜಿಪ್ಟ್‌ನ ಪ್ರಮುಖ ಆದೇಶಗಳಲ್ಲಿ ಒಂದಾಗಿತ್ತು.* 1997ರ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್ ಪ್ರವಾಸ ಕೈಗೊಂಡಿದ್ದಾರೆ. ಪಪುವಾ ನ್ಯೂಗಿನಿಯ, ಫಿಜಿ, ಭೂತಾನ್, ಅಮೆರಿಕ, ಬಹರೇನ್, ಮಾಲ್ಡೀವ್ಸ್, ರಷ್ಯಾ, ಯುಎಇ, ಪ್ಯಾಲೆಸ್ಟೀನ್, ಅಫ್ಗಾನಿಸ್ತಾನ, ಸೌದಿ ಅರೇಬಿಯಾ ರಾಷ್ಟ್ರಗಳಿಂದಲೂ ಅತ್ಯುನ್ನತ್ತ ಗೌರವಕ್ಕೆ ಮೋದಿ ಭಾಜನರಾಗಿದ್ದಾರೆ.