* ವಿವಿಧ ಕ್ಷೇತ್ರಗಳಲ್ಲಿ ಅಧಮ್ಯ ಸಾಧನೆಗೈದ 19 ಮಕ್ಕಳಿಗೆ ಜನವರಿ.22 (ಸೋಮವಾರ) ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ' ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ .* ಕೇಂದ್ರಾಡಳಿತ ಪ್ರದೇಶ ಮತ್ತು 18 ರಾಜ್ಯಗಳ ಒಟ್ಟು 9 ಬಾಲಕರು ಹಾಗೂ 10 ಬಾಲಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.* 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2024' ರ ಪ್ರಶಸ್ತಿಯನ್ನು ಆರು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಕಲೆ ಮತ್ತು ಸಂಸ್ಕೃತಿ (7), ಶೌರ್ಯ (1) ವಿಜ್ಞಾನ ಮತ್ತು ತಂತ್ರಜ್ಞಾನ (1), ಸಾಮಾಜಿಕ ಸೇವೆ (4) ಕ್ರೀಡೆ (5) ಹಾಗೂ ಆವಿಷ್ಕಾರ ಕ್ಷೇತ್ರದಲ್ಲಿ ಒಬ್ಬರಿಗೆ ಪ್ರಶಸ್ತಿ ನೀಡಲಾಗುತ್ತಿದೆ.* 5 ರಿಂದ 18 ವರ್ಷದೊಳಗಿನ ಮಕ್ಕಳ ಸಾಧನೆಯನ್ನು ಗುರುತಿಸಿ ಗೌರವಿಸುವುದೇ ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ. ಪ್ರಶಸ್ತಿಯು ಪದಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರಲಿದೆ.* ಕರ್ನಾಟಕದ ಚೆಸ್ ಮಾಸ್ಟರ್‌ ಚಾರ್ವಿ ಅನಿಲ್‌ಕುಮಾರ್ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ 2024 ಗೆ ಆಯ್ಕೆಯಾಗಿದ್ದಾರೆ. ಒಂಬತ್ತು ವರ್ಷದ ಚಾರ್ವಿ 2022 ರಲ್ಲಿ ಜಾರ್ಜಿಯಾದಲ್ಲಿ ನಡೆದ ವಿಶ್ವ ಕೆಡೆಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 8 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.- ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2024 ರ ಪ್ರಶಸ್ತಿಗೆ ಆಯ್ಕೆಯಾದ 19 ಮಕ್ಕಳು 1) ಆದಿತ್ಯ ವಿಜಯ್ ಬ್ರಾಹ್ಮಣೆ (ಮರಣೋತ್ತರ) ಮಹಾರಾಷ್ಟ್ರ - ಶೌರ್ಯ2) ಅನುಷ್ಕಾ ಪಾಠಕ್ - ಉತ್ತರ ಪ್ರದೇಶ - ಕಲೆ ಮತ್ತು ಸಂಸ್ಕೃತಿ3) ಅರಿಜೀತ್ ಬ್ಯಾನರ್ಜಿ - ಪಶ್ಚಿಮ ಬಂಗಾಳ- ಕಲೆ ಮತ್ತು ಸಂಸ್ಕೃತಿ4) ಅರ್ಮಾನ್ ಉಭ್ರಾನಿ- ಛತ್ತೀಸ್‌ಗಢ- ಕಲೆ ಮತ್ತು ಸಂಸ್ಕೃತಿ5) ಹೇತ್ವಿ ಕಾನ್ತಿಭಾಯಿ ಖಿಮಸೂರಿಯಾ - ಗುಜರಾತ್ - ಕಲೆ ಮತ್ತು ಸಂಸ್ಕೃತಿ6) ಇಶ್ಫಾಕ್ ಹಮೀದ್ - ಜಮ್ಮು ಮತ್ತು ಕಾಶ್ಮೀರ- ಕಲೆ ಮತ್ತು ಸಂಸ್ಕೃತಿ7) ಎಂಡಿ ಹುಸೇನ್ - ಬಿಹಾರ - ಕಲೆ ಮತ್ತು ಸಂಸ್ಕೃತಿ8) ಪೆಂಡ್ಯಾಲ ಲಕ್ಷ್ಮೀ ಪ್ರಿಯಾ - ತೆಲಂಗಾಣ - ಕಲೆ ಮತ್ತು ಸಂಸ್ಕೃತಿ9) ಸುಹಾನಿ ಚೌಹಾಣ್ - ದೆಹಲಿ - ಆವಿಷ್ಕಾರದಲ್ಲಿ10) ಆರ್ಯನ್ ಸಿಂಗ್ - ರಾಜಸ್ಥಾನ - ವಿಜ್ಞಾನ ಮತ್ತು ತಂತ್ರಜ್ಞಾನ11) ಅವನೀಶ್ ತಿವಾರಿ- ಮಧ್ಯಪ್ರದೇಶ - ಸಮಾಜ ಸೇವೆ12) ಗರಿಮಾ- ಹರಿಯಾಣ - ಸಮಾಜ ಸೇವೆ13) ಜ್ಯೋತ್ಸ್ನಾ ಅಕ್ತರ್ - ತ್ರಿಪುರಾ - ಸಮಾಜ ಸೇವೆ14) ಸಾಯಂ ಮಜುಂದರ್ - ಅಸ್ಸಾಂ- ಸಮಾಜ ಸೇವೆ15) ಆದಿತ್ಯ ಯಾದವ್ - ಉತ್ತರ ಪ್ರದೇಶ- ಕ್ರೀಡೆ16) ಚಾರ್ವಿ ಎ - ಕರ್ನಾಟಕ - ಕ್ರೀಡೆ17) ಜೆಸಿಕ್ಕಾ ನೆಯಿ ಸರಿಂಗ್ - ಅರುಣಾಚಲ ಪ್ರದೇಶ - ಕ್ರೀಡೆ18) ಲಿಂತೋಯ್ ಚನಂಬಮ್ - ಮಣಿಪುರ- ಕ್ರೀಡೆ19) ಆರ್ ಸೂರ್ಯ ಪ್ರಸಾದ್ - ಆಂಧ್ರಪ್ರದೇಶ - ಕ್ರೀಡೆ