Job Description: * ಪಂಜಾಬ್ ರಾಜ್ಯದಲ್ಲಿ 2029 ರೊಳಗೆ 100 ಮೀಟರ್ ಆಳದವರೆಗೆ ಅಂತರ್ಜಲ ಬರಿದಾಗುತ್ತದೆ ಹಾಗೂ 2039 ರ ಹೊತ್ತಿಗೆ 300 ಮೀಟರ್ ಆಳದವರೆಗೆ ಅಂತರ್ಜಲ ಬರಿದಾಗುತ್ತದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿಯು 2022 ರ ಜೂನ್ ನಲ್ಲಿ ಪಂಜಾಬ್ ರಾಜ್ಯದ ಅಂತರ್ಜಲದ ಬಗ್ಗೆ ವರದಿ ನೀಡಿತ್ತು. * ಈ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯವು ಅಂತರ್ಜಲ ಸಂರಕ್ಷಣೆಗಾಗಿ "ಅಂತರ್ಜಲ ಬಳಕೆ ಮತ್ತು ಸಂರಕ್ಷಣೆ ನಿರ್ದೇಶನಗಳು" ಎಂಬ ಹೊಸ ನೀತಿಯನ್ನು ಅಳವಡಿಸಿಕೊಂಡಿದೆ. ಈ ನಿರ್ದೇಶನದನ್ವಯ ಹೆಚ್ಚು ಅಂತರ್ಜಲ ಬಳಸುವ ಜನರಿಗೆ ಬಂಜಾಬ್ ಸರ್ಕಾರ ಶುಲ್ಕ ವಿಧಿಸಿದೆ. ಬಳಕೆ, ಕೃಷಿ, ಮಿಲಿಟರಿ ಮತ್ತು ಇತರೆ ಸರ್ಕಾರಿ ಸಂಸ್ಥೆಗಳು ಶುಲ್ಕ ವಿಧಿಸುವಂತಿಲ್ಲ. * ನೀರಿನ ಸಮತೋಲನವನ್ನು ಹೆಚ್ಚಿಸುವದು ಹಾಗೂ ಅಂತರ್ಜಲವನ್ನು ಸಂರಕ್ಷಿಸುವದು ಈ ಹೊಸ ನೀತಿಯ ಉದ್ದೇಶವಾಗಿದೆ. ಕೈಗಾರಿಕೆಗಳು ಅಂತರ್ಜಲವನ್ನು ಅತಿಯಾಗಿ ಬಳಸುವದಕ್ಕೆ ತಡೆಹಾಕುವದು ಕೂಡ ಇದರ ಗುರಿಯಾಗಿದೆ.* ಅಂತರ್ಜಲ ತೆಗೆಯುವಿಕೆ ಹಾಗೂ ಮರು ಪುರಾಣ ಅವಧಿಯ ಆಧಾರದಲ್ಲಿ ಪಂಜಾಬ್ ಅನ್ನು ಮೂರೂ ವಲಯಗಳಾಗಿ ವಿಂಗಡಿಸಲಾಗಿದೆ.1) ಹಸಿರು ವಲಯ - 4 ರೂಪಾಯಿ ಯಿಂದ 14 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ.2) ಹಳದಿ ವಲಯ - 6 ರೂಪಾಯಿ ಯಿಂದ 18 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ.3) ಕಿತ್ತಳೆ ವಲಯ - 8 ರೂಪಾಯಿ ಯಿಂದ 22 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ.