* ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು 'ಪಂಚಮಿತ್ರ' ಪೋರ್ಟಲ್‌ ಹಾಗೂ 'ಪಂಚಮಿತ್ರ ವಾಟ್ಸ್‌ಆ್ಯಪ್‌ ಚಾಟ್‌'ಗೆ ಚಾಲನೆ ನೀಡಿದರು. ಈ ಪೋರ್ಟಲ್ ಅಡಿಯಲ್ಲಿ ಗ್ರಾಮ ಪಂಚಾಯ್ತಿ ಕೆಲ ಸೇವೆಗಳು ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.* ಗ್ರಾಮ ಪಂಚಾಯಿತಿ ಮಟ್ಟದಲ್ಲೇ ನಾನಾ ಇಲಾಖೆಗಳ 89 ಸೇವೆ ನೀಡಿಕೆ ಹಾಗೂ ಕುಂದುಕೊರತೆ ಬಗ್ಗೆ ಅಹವಾಲುಗಳನ್ನು 'ಪಂಚಮಿತ್ರ' ಹೊಸ ಪೋರ್ಟಲ್‌ ಹಾಗೂ ವಾಟ್ಸ್‌ಆ್ಯಪ್‌ ಚಾಟ್‌ ಡಿಜಿಟಲ್‌ ವೇದಿಕೆ ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಪ್ರಯತ್ನವನ್ನು ರಾಜ್ಯ ಸರಕಾರ ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೊಳಿಸಿದೆ.* ಅದಕ್ಕೆ ಪೂರಕವಾಗಿ ರಾಜ್ಯದ 5,991 ಗ್ರಾಮಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ಹೆಜ್ಜೆ ಇಟ್ಟಿದೆ. ಅದರಂತೆ ಇನ್ನು ಮುಂದೆ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಆಯ್ದ ಸೇವೆಗಳನ್ನು 'ವಾಟ್ಸ್‌ಆ್ಯಪ್‌ ಚಾಟ್‌' ಸೇವೆ ಮೂಲಕವೇ ಪಡೆಯಲು ಅವಕಾಶವಾಗಲಿದೆ.* ರಾಜ್ಯದ ಗ್ರಾಮ ಪಂಚಾಯ್ತಿ ಸೇವೆಗಳನ್ನು ಮತ್ತಷ್ಟು ಜನರ ಬಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆ ಇರಿಸಿದೆ. ಅದೇ ಪಂಚಮಿತ್ರ ಪೋರ್ಟಲ್ ಅನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆಗೊಳಿಸಿದ್ದಾರೆ. * ಎಲ್ಲ ಗ್ರಾಮ ಪಂಚಾಯಿತಿಗಳ ಎಲ್ಲ ಸಭೆಗಳ ವೆಬ್‌ ಕಾಸ್ಟಿಂಗ್‌ ಆಗಲಿದ್ದು, ಸಾರ್ವಜನಿಕರು ನೇರವಾಗಿ ವೀಕ್ಷಿಸಲು ಅವಕಾಶವಾಗಲಿದೆ. ಈಗಾಗಲೇ 74,902 ಸಭೆಗಳ ವೆಬ್‌ಕಾಸ್ಟಿಂಗ್‌ ಆಗಿದ್ದು, 1 ಲಕ್ಷ ಸಭೆಗಳ ಶೆಡ್ಯೂಲ್‌ ಮಾಡಲಾಗಿದೆ.* ''ಗ್ರಾಮ ಪಂಚಾಯಿತಿ ಮಟ್ಟದಲ್ಲಿನ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾರ್ವಜನಿಕರು ಅನಗತ್ಯವಾಗಿ ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು. ಅಗತ್ಯ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ 'ಪಂಚಮಿತ್ರ' - ವಾಟ್ಸ್‌ಆ್ಯಪ್‌ ಯೋಜನೆ ಜಾರಿಗೊಳಿಸಲಾಗಿದೆ. * ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 17 ಸೇವೆಗಳು ಮತ್ತು ಇತರ ಇಲಾಖೆಗೆ ಸಂಬಂಧಿಸಿದ 72 ಸೇವೆಗಳು ಈ ಎರಡೂ ಡಿಜಿಟಲ್‌ ವೇದಿಕೆಗಳಲ್ಲಿ ಲಭ್ಯವಾಗಲಿದೆ,'' ಎಂದು ಹೇಳಿದರು.