* ಮಿಗ್ -29 ಯುದ್ಧ ವಿಮಾನ ಸೇರಿದಂತೆ ಮಾರ್ಚ್ 1 ರಂದು ರಕ್ಷಣಾ ಸಚಿವಾಲಯವು ಬ್ರಹ್ಮೋಸ್ ಕ್ಷಿಪಣಿಗಳು, ಹಡಗಿನ ಬ್ರಹ್ಮೋಸ್ ಸಿಸ್ಟಮ್‌ಗಳು, ಕ್ಲೋಸ್-ಇನ್ ವೆಪನ್ ಸಿಸ್ಟಮ್‌ಗಳು, ಹೈ-ಪವರ್  ರಾಡಾರ್‌ಗಳಿಗಾಗಿ ರೂ.39,125 ಕೋಟಿ ಮೌಲ್ಯದ ಐದು ಒಪ್ಪಂದಗಳಿಗೆ ಸಹಿ ಹಾಕಿದೆ.* ಡ್ರೋನ್ ಹಾಗೂ ಇತರ ವೈಮಾನಿಕ ಸಾಧನಗಳ ಮೂಲಕ ನಡೆಸುವ ದಾಳಿಗೆ ಪ್ರತಿರೋಧ ಒಡ್ಡಬಲ್ಲ ವ್ಯವಸ್ಥೆ ( ಸಿ ಐಡಬ್ಲ್ಯೂ ಎಸ್) ಹಾಗೂ ರಾಡಾರ್ ಪೂರೈಕೆಗಾಗಿ ಎಲ್ ಅಂಡ್ ಟಿ ಎರಡು ಒಪ್ಪಂದ ಮಾಡಿಕೊಳ್ಳಲಾಗಿದೆ . ಈ ಎರಡು ಒಪ್ಪಂದಗಳನ್ನು ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಸಹಿ ಮಾಡಲಾಗಿದೆ .* ಒಂದು 19,518.65 ಕೋಟಿ ಮೌಲ್ಯದ ಸುಮಾರು 200 ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಿಗೆ ಮತ್ತು ಇನ್ನೊಂದು ₹988.07 ಕೋಟಿ ಮೌಲ್ಯದ ಹಡಗಿನ ಮೂಲಕ ಸಾಗಿಸುವ ಬ್ರಹ್ಮೋಸ್ ಸಿಸ್ಟಮ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭದ್ರತೆಯ ಕ್ಯಾಬಿನೆಟ್ ಸಮಿತಿಯು ಇತ್ತೀಚೆಗೆ ಭಾರತದ ನೌಕಾ ಶಕ್ತಿಯನ್ನು ಹೆಚ್ಚಿಸಲು ಈ ಒಪ್ಪಂದಗಳನ್ನು ಅನುಮೋದಿಸಿದೆ. ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಅಭಿವೃದ್ಧಿಪಡಿಸಿವೆ.* “ಈ ಕ್ಷಿಪಣಿಗಳನ್ನು ಭಾರತೀಯ ನೌಕಾಪಡೆಯ ಯುದ್ಧ ಮತ್ತು ತರಬೇತಿ ಅವಶ್ಯಕತೆಗಳನ್ನು ಪೂರೈಸಲು ಬಳಸಿಕೊಳ್ಳಲಾಗುವುದು. * ಈ ಯೋಜನೆಯು 7-8 ವರ್ಷಗಳ ಅವಧಿಯಲ್ಲಿ ಸುಮಾರು 60,000 ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು  ತಿಳಿಸಿದೆ.