* ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲೆಂದು ಸರ್ಕಾರ ಆರಂಭಿಸಿದ ಪಿಎಂ ವಿಶ್ವಕರ್ಮ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದು ವರ್ಷದಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅತಿ ಹೆಚ್ಚು ನೊಂದಣಿದಾರರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನದಲ್ಲಿದೆ, ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ.    * 2023ರ ಸೆಪ್ಟೆಂಬರ್ 17ರಂದು ಆರಂಭವಾದ ಈ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 2,58,39,625 (ಎರಡೂವರೆ ಕೋಟಿ). ಇದರಲ್ಲಿ ಯಶಸ್ವಿಯಾಗಿ ನೊಂದಣಿ ಪೂರ್ಣಗೊಳಿಸಿದವರು 23,86,369 ಎನ್ನಲಾಗಿದೆ.* ಪಿಎಂ ವಿಶ್ವಕರ್ಮ ಯೋಜನೆಗೆ ನೊಂದಾಯಿಸಿದವರ ಸಂಖ್ಯೆ 23.86 ಲಕ್ಷ. ಇದರಲ್ಲಿ ಕರ್ನಾಟಕದವರೇ ಅತಿಹೆಚ್ಚು ಇದ್ದಾರೆ. ಐದು ಲಕ್ಷಕ್ಕೂ ಹೆಚ್ಚು ಕನ್ನಡಿಗರು ಯೋಜನೆಗೆ ರಿಜಿಸ್ಟರ್ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ ಎರಡು ಲಕ್ಷ ನೊಂದಣಿ ಕಂಡಿದೆ. ರಾಜಸ್ಥಾನಕ್ಕಿಂತ ಕರ್ನಾಟಕದವರ ಸಂಖ್ಯೆ ಎರಡು ಪಟ್ಟಿಗಿಂತಲೂ ಹೆಚ್ಚಿದೆ.* ಅತಿಹೆಚ್ಚು ನೊಂದಣಿ ಕಂಡ ಟಾಪ್-5 ರಾಜ್ಯಗಳು1. ಕರ್ನಾಟಕ: 5,19,3462. ರಾಜಸ್ಥಾನ: 2,01,3953. ಮಹಾರಾಷ್ಟ್ರ: 2,00,2784. ಗುಜರಾತ್: 1,95,7595. ಮಧ್ಯಪ್ರದೇಶ: 1,76,936 * ಪಿಎಂ ವಿಶ್ವಕರ್ಮ ಯೋಜನೆಯಿಂದ ಏನು ಲಾಭ : - ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ನೊಂದಾಯಿತರಾದವರಿಗೆ ಅವರ ಕೌಶಲ್ಯ ಪರಿಶೀಲನೆ ಆಗಿ, ಮೂಲಭೂತ ತರಬೇತಿ ನೀಡಲಾಗುತ್ತದೆ.- ಆಸಕ್ತ ಅಭ್ಯರ್ಥಿಗಳು 15 ದಿನಗಳ ಅವಧಿಯ ಮುಂದುವರಿದ ತರಬೇತಿ ಪಡೆಯಬಹುದು. ತರಬೇತಿ ಅವಧಿಯಲ್ಲಿ ದಿನಕ್ಕೆ 500 ರೂ ಸ್ಟೈಪೆಂಡ್ ಸಿಗುತ್ತದೆ.- ಇದಾದ ಬಳಿಕ ಆಧುನಿಕ ಪರಿಕರಗಳನ್ನು ಖರೀದಿಸಲು ನೆರವಾಗಲು ಟೂಲ್ಕಿಟ್ ಇನ್ಸೆಂಟಿವ್ ಆಗಿ 15,000 ರೂ ಒದಗಿಸಲಾಗುತ್ತದೆ.- ಕಡಿಮೆ ಬಡ್ಡಿದರದಲ್ಲಿ ಅಡಮಾನ ರಹಿತವಾದ ಒಂದು ಲಕ್ಷ ರೂ ಮೊತ್ತದ ಸಾಲ ಸೌಲಭ್ಯ ಕೊಡಲಾಗುತ್ತದೆ. ರಾಷ್ಟ್ರೀಯ ಮಾರುಕಟ್ಟೆ ಸಮಿತಿ (ಎನ್ಸಿಎಂ) ವತಿಯಿಂದ ಬ್ರ್ಯಾಂಡಿಂಗ್, ಪ್ರಚಾರ, ಜಾಹೀರಾತು ಇತ್ಯಾದಿ ಮಾರ್ಕೆಟಿಂಗ್ ನೆರವು ಕೂಡ ಅಭ್ಯರ್ಥಿಗಳಿಗೆ ಸಿಗುತ್ತದೆ.