Job Description: * ಭಾರತದ ಫುಟ್‌ಬಾಲ್ ಕಂಡಂತಹ ಶ್ರೇಷ್ಠ ಗೋಲ್‌ ಕೀಪರ್‌ಗಳಲ್ಲಿ ಒಬ್ಬರಾದ 76 ವರ್ಷದ ಕೆ.ಸಂಪತ್ ಮಾರ್ಚ್ 7 ರ ಮಂಗಳವಾರ ದಿನದಂದು ನಿಧನರಾದರು. * ವಿವಿಧ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅವರು 1968 ರಲ್ಲಿ ಸಂತೋಷ್ ಟ್ರೋಫಿ ಜಯಿಸಿದ್ದ ಕರ್ನಾಟಕ ತಂಡದ ಗೋಲ್‌ಕೀಪರ್ ಆಗಿದ್ದರು. ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಸರ್ವಿಸಸ್ ಮತ್ತು ಗೋವಾ ತಂಡಗಳನ್ನೂ ಪ್ರತಿನಿಧಿಸಿದ್ದರು.* 1970ರ ಮರ್ಡೆಕಾ ಕಪ್ ಟೂರ್ನಿ ಮತ್ತು ಬ್ಯಾಂಕಾಂಕ್ ಏಷ್ಯನ್ ಗೇಮ್ಸ್ನಲ್ಲಿ ಕಂಚು ಜಯಿಸಿದ್ದ ಭಾರತ ತಂಡದಲ್ಲಿ ಅವರು ಆಡಿದ್ದರು. 1971ರ ಕಿಂಗ್ ಕಪ್ ಮತ್ತು 1972ರ ಮರ್ಡೆಕಾ ಕಪ್‌ನಲ್ಲಿ ಪಾಲ್ಗೊಂಡಿದ್ದರು.* ಎಂಇಜಿ ಮತ್ತು ಡೆಂಪೊ ಸ್ಪೋರ್ಟ್ಸ್ ಕ್ಲಬ್ ತಂಡಗಳ ಪರ ಆಡಿದ್ದರಲ್ಲದೆ, 1975 ರಲ್ಲಿ ರೋವರ್ಸ್ ಕಪ್ ಜಯಿಸಿದ್ದ ತಂಡದ ಸದಸ್ಯರಾಗಿದ್ದರು.* ವೃತ್ತಿಜೀವನಕ್ಕೆ ನಿವೃತ್ತಿ ಪ್ರಕಟಿಸಿದ್ದ ಬಳಿಕ ಬಿಇಎಲ್ ಮತ್ತು ಎಎಸ್‌ಸಿ ಒಳಗೊಂಡಂತೆ ಕೆಲವು ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.