Job Description: * ಫೋರ್ಬ್ಸ್‌ 2022ರ ಉದ್ಯಮದ ಜೊತೆಗೆ ಸಾಮಾಜಿಕ ಅಭಿವೃದ್ಧಿಗಾಗಿ ದಾನ ಮಾಡುತ್ತಿರುವವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹೆಚ್‌ಸಿಎಲ್‌ನ ಸಹ ಸಂಸ್ಥಾಪಕ ಶಿವನಾಡರ್‌ 2022ರಲ್ಲಿ 1,161 ಕೋಟಿ ರೂ ದಾನ ಮಾಡುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.* ಕೆಲವು ದಶಕಗಳಿಂದ ಹಲವು ಸಾಮಾಜಿಕ ಕಾರ್ಯಗಳಿಗಾಗಿ ಕೋಟ್ಯಂತರ ರೂ ದಾನ ಮಾಡುತ್ತಿರುವ ಶಿವ ನಾಡರ್‌ ಈ ಬಾರಿಯೂ ಪ್ರತಿದಿನ 3 ಕೋಟಿ ರೂ ಅಧಿಕ ದಾನ ಮಾಡುವ ಮೂಲಕ ಮೊದಲ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕಾಗಿ ಇವರು ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ.* ದಾನ ಮಾಡಿರುವ ಪಟ್ಟಿಯಲ್ಲಿ ಕ್ರಮೇಣ 2ನೇ ಸ್ಥಾನದಲ್ಲಿ ಅಜೀಂ ಪ್ರೇಮ್‌ಜಿ ಇದ್ದಾರೆ. ಇವರು 484 ಕೋಟಿ ರೂ ದಾನ ಮಾಡೀದ್ದಾರೆ.* ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥರಾದ ಮುಖೇಶ್‌ ಅಂಬಾನಿಯವರು 2022 ವರ್ಷ 411 ಕೋಟಿ ರೂ ದಾನ ಮಾಡಿದ್ದಾರೆ. ಅಲ್ಲದೇ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಪ್ರತಿ ದಿನ 1 ಸಾವಿರ ಟನ್‌ ಆಮ್ಲಜನಕ (Oxygen) ಹಾಗೂ ಊಟದ ಸೌಲಭ್ಯವನ್ನು ಒದಗಿಸಿದೆ.