Job Description: * ಕ್ವಾಡಾ ದೇಶಗಳು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ಸಮುದ್ರಯಾನಕ್ಕೆ ಅವಕಾಶವಿರಬೇಕು ಎಂದು ಹೇಳಿವೆ. ಜೊತೆಗೆ ಭಯೋತ್ಪಾದನೆ ನಿಗ್ರಹಕ್ಕೆ ಕ್ವಾಡ್ ಕಾರ್ಯಪಡೆಯ ಅಗತ್ಯವಿದೆ ಎಂದು ಹೇಳಲಾಗಿದೆ.* ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ, ಆರ್ಥಿಕ ನೆರವು ನೀಡುವ, ಭಯೋತ್ಪಾದನಾ ಕೃತ್ಯ ನಡೆಸಲು ನೆಲೆ ಒದಗಿಸುವ ಯತ್ನಗಳನ್ನು ಖಂಡಿಸಬೇಕು. ಭಯೋತ್ಪಾದನೆಯ ಹೊಣೆಗಾರಿಕೆಯನ್ನು ಹೊರಿಸಲು ಪ್ರಾದೇಶಿಕ ಮತ್ತು ಜಾಗತಿಕ ಕೂಟಗಳ ಜತೆಗೆ ಕ್ವಾಡ್ ಕೆಲಸ ಮಾಡಲಿದೆ.* ಈ ಕಾರ್ಯಪಡೆಯು ಪ್ಯಾಡ್ ಗುಂಪು ಮತ್ತು ಹಿಂದೂಮಹಾಸಾಗರ ಜೊಫಿಕ್ ಪ್ರದೇಶದಲ್ಲಿನ ಮಿತ್ರರಾಷ್ಟ್ರಗಳ ಜೊತೆಗೂ ಕೆಲಸ ಮಾಡಲಿದೆ ಸ್ವಾತಂತ್ರ್ಯ, ಕಾನೂನಿನ ಆಳ್ವಿಕೆ, ಸಾರ್ವಭೌಮತೆಯನ್ನು ಗೌರವಿಸುವ ನೀತಿಗಳನ್ನು ಕ್ವಾಡ್ ಎತ್ತಿಹಿಡಿಯುತ್ತದೆ. ಯಾವುದೇ ಸಂಘರ್ಷಗಳನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕ್ವಾಡ್ ಒತ್ತಾಯಿಸುತ್ತಿದೆ.* ಡ್ರೋನ್ ಮತ್ತು ಇಂಟರ್ ನೆಟ್ ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಹೊಸ ಸ್ವರೂಪದ ಭಯೋತ್ಪಾದನೆಗೆ ಬಳಕೆಯಾಗುತ್ತಿದ್ದು,ಇದು ಅತ್ಯಂತ ಕಳವಳಕಾರಿ ಬೆಳವಣಿಗೆ, ಹೊಸ ಸ್ವರೂಪದ ಭಯೋತ್ಪಾದನೆಯನ್ನು ನಿಗ್ರಹಿಸಲು ಅಗತ್ಯವಿರುವ ಕ್ರಮಗಳನ್ನು ರೂಪಿಸಲು ಕ್ವಾಡ್ ಕಾರ್ಯಪಡೆ ಕೆಲಸ ಮಾಡಲಿದೆ.