Job Description: * ಕತಾರ್ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರಿಗೆ ಫಿಫಾದ ಅತ್ಯುತ್ತಮ 2022 ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಮೆಸ್ಸಿ ಯವರು ಎರಡನೇ ಬಾರಿ ಗೆದ್ದಿದ್ದಾರೆ.* ಪ್ಯಾರಿಸ್ನಲ್ಲಿ ಜರುಗಿದ ಅದ್ಧೂರಿ ಪ್ರಶಸ್ತಿ ಸಮಾರಂಭದಲ್ಲಿ ಲಿಯೊನೆಲ್ ಮೆಸ್ಸಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಗಾಗಿ ಒಟ್ಟು 14 ಆಟಗಾರರು ನಾಮನಿರ್ದೇಶನಗೊಂಡಿದ್ದರು. ಅದರಲ್ಲೂ ಫಿಫಾ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದ್ದ ಕೈಯಲಿನ್ ಎಂಬಾಪೆ, ಮೆಸ್ಸಿಗೆ ನೇರ ಫೈಟ್ ನೀಡಿದ್ದರು.* ಸ್ಪೇನ್ ಮಹಿಳಾ ತಂಡದ ಅಲೆಕ್ಸಿಯಾ ಪುಟೇಲ್ಲಾಸ್ ರವರಿಗೂ ಸಹ ಸತತ ಎರಡನೇ ಬಾರಿ ವರ್ಷದ ಶ್ರೇಷ್ಟ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.