* ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದು ದೇವಾಲಯವನ್ನು ಫೆಬ್ರುವರಿ 14 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ ಎಂದು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ತಿಳಿಸಿದೆ. * ಈ ದೇವಾಲಯವನ್ನು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ನಿರ್ಮಿಸಿದ್ದು, ಯುಎಇಯ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯವಾಗಿದೆ.* ಅಬು ಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ಈ ದೇವಾಲಯ ಅರಳುತ್ತಿರುವ ಕಮಲದ ಹೂವನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಬಿಎಪಿಎಸ್ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್ ನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ.* ಫೆಬ್ರವರಿ 2018 ರಲ್ಲಿ ಪ್ರಧಾನಿ ಮೋದಿ ಅವರು ದೇವಾಲಯದ ಯೋಜನೆ ಉದ್ಘಾಟಿಸಿದ್ದರು. ಡಿಸೆಂಬರ್ 2019 ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ಈ ದೇವಾಲಯವನ್ನು 5.4 ಹೆಕ್ಟೇರ್ ಭೂಮಿ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. 700 ಕೋಟಿ ರೂ. ವೆಚ್ಚದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ.* ಈ ದೇವಾಲಯವನ್ನು 40,000 ಕ್ಯೂಬಿಕ್ ಮೀಟರ್ ಅಮೃತಶಿಲೆ, 1,80,000 ಘನ ಮೀಟರ್ ಮರಳುಗಲ್ಲು ಮತ್ತು 18 ಲಕ್ಷ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. * ವಿಶಾಲವಾದ ದೇವಾಲಯ ದೊಡ್ಡ ಆಂಫಿಥಿಯೇಟರ್, ಗ್ಯಾಲರಿ, ಗ್ರಂಥಾಲಯ, ಫುಡ್ ಕೋರ್ಟ್, ಮಜ್ಲಿಸ್ ಮತ್ತು 5,000 ಜನರಿಗೆ ಸ್ಥಳಾವಕಾಶವಿರುವ ಎರಡು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಉದ್ಯಾನಗಳು ಮತ್ತು ಮಕ್ಕಳಿಗಾಗಿ ಆಟದ ಮೈದಾನ ಕೂಡ ಮಾಡಲಾಗಿದೆ. ಇದು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ ಗುಲಾಬಿ ಮರಳುಗಲ್ಲು ಮತ್ತು ಅಮೃತಶಿಲೆಯ ಮುಂಭಾಗವನ್ನು ಏಳು ಗೋಪುರಗಳೊಂದಿಗೆ ಸಂಯೋಜಿಸುತ್ತದೆ. * ಬಿಎಪಿಎಸ್ ಎಂದರೆ ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಎಂದರ್ಥ.