* ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಭಾರತದಲ್ಲಿ ಒಂಬತ್ತು ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿ ಫಾರ್ಸಿ (ಪರ್ಷಿಯನ್)ಅನ್ನು ಸೇರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಘೋಷಿಸಿದರು.* 2004 ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದ ಭಾರತದ ಮೊದಲ ಭಾಷೆ ತಮಿಳು ಭಾಷೆಯಾಗಿದೆ. ಹಾಗೂ ಸಂಸ್ಕೃತ, ಕನ್ನಡ, ಮಾಲಿಯಾಳಂ ಮತ್ತು ಒಡಿಶಾ ಭಾಷೆಗಳನ್ನು ಕೇಂದ್ರ ಸರ್ಕಾರವು ಭಾರತದಲ್ಲಿ ಶಾಸ್ತ್ರೀಯ ಭಾಷೆಗಳೆಂದು ಘೋಷಿಸಿದೆ.* ಸಾಂಸ್ಕೃತಿಕ ಸಂಬಂಧಗಳನ್ನು ಆಳಗೊಳಿಸುವ ಮಹತ್ವದ ಕ್ರಮದಲ್ಲಿ ಇರಾನ್ ಪ್ರವಾಸದ ವೇಳೆ ಇರಾನ್ ಸಹವರ್ತಿ ಎಚ್ ಮಿರ್- ಅಬ್ದುಲ್ಲಹಿಯಾನ್    ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಎಸ್ ಜೈಶಂಕರ್ ಅವರು, ಇರಾನ್ ಮತ್ತು ಭಾರತದ ಮಧ್ಯೆ ಸಾಂಸ್ಕೃತಿಕ, ಸಾಹಿತ್ಯ ಮತ್ತು ಭಾಷಾ ಸಂಪರ್ಕಗಳ ಕುರಿತು ವಿವರಿಸಿದರು.* ಭಾರತೀಯ ಶೈಕ್ಷಣಿಕ ಚೌಕಟ್ಟಿನೊಳಗೆ ಪಾರ್ಸಿಯ ಶ್ರೀಮಂತ - ಪರಂಪರೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮತ್ತು ಮೆಚ್ಚುಗೆ ಬೆಳೆಸುವ ಬದ್ಧತೆ ಇದಾಗಿದೆ.* ಭಾರತದಲ್ಲಿ 2004 ರಿಂದ ಈವರೆಗೆ ಒಟ್ಟು ಆರು ಭಾಷೆಗಳಿಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದೆ, ಅವುಗಳೆಂದರೆ,- ತಮಿಳು ಭಾಷೆಗೆ - 2004- ಸಂಸ್ಕೃತ ಭಾಷೆಗೆ  - 2005- ಕನ್ನಡ ಭಾಷೆಗೆ - 2008- ತೆಲುಗು ಭಾಷೆಗೆ - 2008- ಮಲಯಾಳಂ ಭಾಷೆಗೆ - 2013- ಓಡಿಯ ಭಾಷೆಗೆ - 2014