* ಪ್ರತಿ ವರ್ಷ ಜನವರಿ 17 ರಂದು ತಂತು ಕಾರಿನ ದಿನವನ್ನು ಆಚರಿಸಲಾಗುತ್ತದೆ.ಆಂಡ್ರ್ಯೂ ಸ್ಮಿತ್ ಹಲ್ಲಿಡಿ ಅವರು 1871 ರಲ್ಲಿ ಕೇಬಲ್ ಕಾರಿಗೆ ಪೇಟೆಂಟ್ ಪಡೆದಿದ್ದಾರೆ ಎಂದು ಆಚರಿಸಲಾಗುತ್ತದೆ.* ಸ್ಯಾನ್ ಫ್ರಾನ್ಸಿಸ್ಕೋದ ಕಡಿದಾದ ಬೆಟ್ಟಗಳ ಮೇಲೆ ಕಾರುಗಳನ್ನು ಎಳೆಯಲು ಹ್ಯಾಲಿಡೀ ಅವರು ಹೆಣಗಾಡುವುದನ್ನು ಕಂಡು ಇದರಿಂದಾಗಿ ಜನರು ಬಿದ್ದು ಸಾಯುವುದು ಸರ್ವೆ ಸಾಮಾನ್ಯವಾಗಿತ್ತು. ಹಾಗಾಗಿ ಇದನ್ನು ಕಂಡು ಬಲವಾದ ಕೇಬಲ್ ಕಾರುಗಳನ್ನು ಬೆಟ್ಟದ ಮೇಲೆ ಮತ್ತು ಕೆಳಗೆ ಚಲಿಸುವ ವ್ಯವಸ್ಥೆಯನ್ನು ಆವಿಷ್ಕರಿಸಲು ಅವರು ನಿರ್ಧರಿಸಿದರು. * 1873 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹ್ಯಾಲಿಡೀ ಅವರು ಕೇಬಲ್ ಕಾರುಗಳನ್ನು ಕಂಡುಹಿಡಿದರು. ಆರಂಭಿಕವಾಗಿ ಗಣಿಗಾರಿಕೆಗಳ ಸಾರಿಗೆ ವ್ಯವಸ್ಥೆಗಳಲ್ಲಿ ಕೇಬಲ್ ಕಾರುಗಳನ್ನು ಬಳಸಲಾಯಿತು.* ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಜವಾದ ಕೇಬಲ್ ಕಾರುಗಳನ್ನು ಚಲಾಯಿಸುವ ಕೊನೆಯ ಅಮೇರಿಕನ್ ನಗರವಾಗಿದೆ. ಇತರ ಅಮೇರಿಕನ್ ನಗರಗಳಲ್ಲಿ ಎಲೆಕ್ಟ್ರಿಕ್ ಸ್ಟ್ರೀಟ್‌ಕಾರ್‌ಗಳನ್ನು ಕಾಣಬಹುದು. ಅದೇ ರೀತಿ ಗದಗ ಹತ್ತಿರ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನಲ್ಲಿ ಕೇಬಲ್ ಕಾರ್ ಕಾಣಬಹುದು.* 1826 ರಲ್ಲಿ ಮೊದಲ ಕೇಬಲ್-ಚಾಲಿತ ರೈಲ್ವೆ ವ್ಯವಸ್ಥೆ ಮಾಡಲಾಗಿತ್ತು. 1881 ರಲ್ಲಿ ನ್ಯೂಜಿಲೆಂಡ್‌ನ ಡ್ಯುನೆಡಿನ್‌ನಲ್ಲಿ  ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಹೊರಗೆ ಮೊದಲು ಕೇಬಲ್ ಕಾರ್ ವ್ಯವಸ್ಥೆಮಾಡಲಾಗಿತ್ತು.* 1882 ರಲ್ಲಿ ಚಿಕಾಗೋ ಸಿಟಿ ರೈಲ್ವೆ ಇದು ಅತಿದೊಡ್ಡ ಮತ್ತು ಹೆಚ್ಚು ಲಾಭದಾಯಕ ಕೇಬಲ್ ಕಾರ್ ವ್ಯವಸ್ಥೆಯಾಗುತ್ತದೆ. 1890 ರಲ್ಲಿ ವಿದ್ಯುತ್ ಚಾಲಿತ ಟ್ರಾಮ್‌ಗಳು ರೂಢಿಯಲ್ಲಿದ್ದವು ಮತ್ತು ಇವು ಅಸ್ತಿತ್ವದಲ್ಲಿರುವ ಕೇಬಲ್ ಕಾರ್ ವ್ಯವಸ್ಥೆಗಳನ್ನು ಬದಲಾಯಿಸುತ್ತವೆ.* ಈ ಕಾರುಗಳು ಭೂಗತ ಚಲಿಸುವ ಕೇಬಲ್‌ಗಳ ಬದಲಿಗೆ ಓವರ್‌ಹೆಡ್ ವಿದ್ಯುತ್ ತಂತಿಗಳಿಗೆ ಸಂಪರ್ಕಿಸುವ ಮೂಲಕ ಕಾರ್ಯನಿರ್ವಹಿಸುತ್ತವೆ. * ಕೇಬಲ್ ಕಾರ್ ಪೇಟೆಂಟ್ ಪಡೆದ ಎರಡು ವರ್ಷಗಳ ನಂತರ ಹ್ಯಾಲಿಡೀ ಕ್ಲೇ ಸ್ಟ್ರೀಟ್‌ನಲ್ಲಿ ವಿಶ್ವದ ಮೊದಲ ಕೇಬಲ್ ಕಾರ್ ರೈಲು ರಸ್ತೆಯನ್ನು ಸ್ಥಾಪಿಸಿದರು.* ಸ್ಯಾನ್ ಫ್ರಾನ್ಸಿಸ್ಕೋದ ಮೂರು ಕೇಬಲ್ ಕಾರ್ ಮಾರ್ಗಗಳಲ್ಲಿ ಎರಡರಲ್ಲಿ ನೆಲೆಗೊಂಡಿರುವ ಮೇಸನ್ ಸ್ಟ್ರೀಟ್‌ನ ಕೇಬಲ್ ಕಾರ್ ಮ್ಯೂಸಿಯಂನಲ್ಲಿ ಕೇವಲ ಗ್ರಿಪ್ ಕಾರ್ ಎಂಟನ್ನು ಮಾತ್ರ ಕಾಣಬಹುದು. ವೆನಿಸ್, ಟ್ಯಾಂಪಾ, ಲಾಸ್ ವೇಗಾಸ್ ಮತ್ತು ಮಿಲನ್‌ನಲ್ಲಿ ಕೇಬಲ್ ಕಾರ್ ರೈಲ್ವೆಗಳನ್ನು ಸಹ ಕಾಣಬಹುದು.