Job Description: * ಇಂಟರ್‌ನ್ಯಾಷನಲ್ ಸೀಬೆಡ್ ಅಥಾರಿಟಿ (ISA)ಯು ಪಾಲಿಮೆಟಾಲಿಕ್ ಗಂಟುಗಳ (ನೊಡ್ಯೂಲ್) ಆಳ ಸಮುದ್ರ ಗಣಿಗಾರಿಕೆಗೆ ಅನುಮತಿ ನೀಡಿದೆ. ಪಾಲಿಮೆಟಾಲಿಕ್ ನೊಡ್ಯೂಲ್‌ಗಳು ಸಾಗರ ತಳೆದ 4ರಿಂದ 6 ಕಿಲೋ ಮೀಟರ್ ಆಳದಲ್ಲಿ ದೊರಕುವ ಆಲೂಗಡ್ಡೆ ಗಾತ್ರದ ಕಲ್ಲಗಳಾಗಿವೆ. ಈ ನೊಡೋಲ್ ಗಳಲ್ಲಿ ನಿಕೆಲ್, ತಾಮ್ರ ಮತ್ತು ಮ್ಯಾಂಗನೀಸ್ ಮುಂತಾದ ಖನಿಜಗಳು ಇರುತ್ತವೆ. * ಭೂಮಿಯ 100 % ಭಾಗದಲ್ಲಿ ಒಟ್ಟು 70ಕ್ಕಿಂತ ಅಧಿಕ ಭಾಗ ನೀರಿನಿಂದ (ಸಾಗರದಿಂದ) ಕೂಡಿದ್ದು, ಹೆಚ್ಚು ಶೋಧಿಸದ ಹಾಗೂ ಸಂಪನ್ಮೂಲ ಬಳಕೆ ಮಾಡಿಕೊಳ್ಳದ ಪ್ರದೇಶಗಳಲ್ಲಿ ಒಂದಾಗಿ ಉಳಿದಿದೆ. ಸಾಗರ ತಳದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ನೊಡ್ಯೂಲ್‌ಗಳು ಕೇಂದ್ರೀಕೃತವಾಗಿರುತ್ತವೆ. ಹೀಗಾಗಿ ಸಾಗರಗಳಲ್ಲಿ ಗಣಿಗಾರಿಕೆ ಕಂಪನಿಗಳಿಗೆ ಆಕರ್ಷಣೀಯವಾಗಿರುತ್ತವೆ.* ISA ಯು 2023 ಜುಲೈನಿಂದ ಸಾಗರದಲ್ಲಿರುವ ಖನಿಜ ತೆಗೆಯಲು ಅನುಮತಿ ನೀಡಿದ್ದು, ಕೊಬಾಲ್ಟ್, ತಾಮ್ರ, ನಿಕೆಲ್ ಮತ್ತು ಮ್ಯಾಂಗನೀಸ್ ಮೊದಲಾದವು ಸಾಗರ ಗಣಿಗಾರಿಕೆ ಮೂಲಕ ಸಾಗರ ತಳದಿಂದ ತೆಗೆಯಲಾಗುವ ಅಮೂಲ್ಯ ಖನಿಜಗಳಲ್ಲಿ ಸೇರಿವೆ.