* ವಿಶ್ವ ಚಾಂಪಿಯನ್ ಲವ್ಲಿನಾ ಬೋರ್ಗೊಹೈನ್ ಅವರು ಏಷ್ಯನ್ ಗೇಮ್ಸ್ ಬಾಕ್ಸಿಂಗ್ (75 ಕೆ.ಜಿ) ಫೈನಲ್ ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾಕ್ಕೆ ಅರ್ಹತೆ ಪಡೆದಿದ್ದು, ಪ್ರೀತಿ ಪವಾರ್ 54 ಕೆ.ಜಿ. ವಿಭಾಗದಲ್ಲಿ ಮತ್ತು ನರೇಂದರ್‌ ಬೆರ್ವಾಲ್ (+92 ಕೆ.ಜಿ) ಅವರು ಮಂಗಳವಾರ ಕಂಚಿನ ಪದಕಗಳನ್ನು ಗೆದ್ದುಕೊಂಡರು.* 75 ಕೆ.ಜಿ. ಸೆಮಿಫೈನಲ್‌ನಲ್ಲಿ ಲವ್ಲಿನಾ ಅವರು ದೀರ್ಘ 'ರೀಚ್' ಮತ್ತು ನೇರ ಪಂಚ್‌ಗಳ ಮೂಲಕ ಹೋರಾಟವನ್ನು ತಮ್ಮ ನಿಯಂತ್ರಣಕ್ಕೆ ಪಡೆದರು. ಮನಿಕೋನ್ ಅವರು ನಂತರವೂ ಹೆಚ್ಚು ಪ್ರತಿರೋಧ ಪ್ರದರ್ಶಿಸಲಿಲ್ಲ.