Job Description: * ಜಗತ್ತಿನ ಎಲ್ಲ ರಾಷ್ಟ್ರ ಗಳಲಿ ಕಳೆದ ವರ್ಷ ಭಾರಿ ಪ್ರಮಾಣದಲಿ ಇಂಗಾಲದ ಡೈಆಕ್ಸೆಡ್ ಹೊರಸೂಸುವಿಕೆ ದಾಖಲಾಗಿದ್ದು, 1900ರಿಂದ ಇಲ್ಲಿಯವರೆಗೆ ಈ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಪರಿಗಣಿಸಿದಲ್ಲಿ, ಕಳೆದ ವರ್ಷ ಗರಿಷ್ಠ ಮಟ್ಟದ ಹೊರಸೂಸುವಿಕೆ ದಾಖಲಾಗಿರುವುದು ಕಂಡುಬಂದಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಗುರುವಾರ ಪ್ರಕಟಿಸಿರುವ ವರದಿಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ.* ವಿಶ್ವದ ಅನೇಕ ನಗರಗಳಲ್ಲಿ ಕಲ್ಲಿದ್ದಲನ್ನು ಕಡಿಮೆ ವೆಚ್ಚದ ಇಂಧನವಾಗಿ ಬಳಸುವುದು ಹೆಚ್ಚಾಗಿದೆ. ಈ ಅಂಶಗಳು ಇಂಗಾಲದ ಡೈ ಆಕ್ಸೆಡ್ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸೇರುವುದಕ್ಕೆ ಕಾರಣವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.* ಪಳೆಯುಳಿಕೆ ಇಂಧನಗಳಾದ ಕಲಿದಲು, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳನ್ನು ದಹಿಸಿದಾಗ ಇಂಗಾಲದ ಡೈ ಆಕ್ಸೆಡ್ ಉತ್ಪತ್ತಿಯಾಗುತ್ತದೆ. ಈ ಅನಿಲ ಪರಿಸರವನ್ನು ಸೇರಿ, ವಾತಾವರಣದ ತಾಪಮಾನ ಹೆಚ್ಚುವಂತೆ ಮಾಡುತ್ತದೆ ಎಂಬುದನ್ನು ವಿವರಿಸಲಾಗಿದೆ.