* 'ನಯೇ ಭಾರತ್ ಕಾ ಸಂವೇದ್' ಎಂಬ ಪುಸ್ತಕವನ್ನು ಭಾರತದ (14ನೇ) ಮಾಜಿ ರಾಷ್ಟಪತಿ ಕೋವಿಂದ ಅವರು ಈ ಪುಸ್ತಕವನ್ನು ಬಿಡುಗಡೆ ಗೊಳಿಸಿದರು. ಕೋವಿಂದ್ ಅವರು ತಮ್ಮ ಮುಖ್ಯ ಭಾಷಣದಲ್ಲಿ, ರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನದ ಬಗ್ಗೆ ಸಾಕಷ್ಟು ಜ್ಞಾನವಿದ್ದರೆ ಎಲ್ಲವೂ ಸುಲಭವಾಗುತ್ತದೆ. ಸಂವಿಧಾನ ರಚನೆಕಾರರು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ಹೊಂದಿದ್ದರು ಎಂಬುದನ್ನು ನಾಗರಿಕರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.  * ಮಾಜಿ ರಾಷ್ಟಪತಿ ಕೋವಿಂದ ಅವರು ಪ್ರಧಾನ ಮಂತ್ರಿಗಳು ಭಾರತದ ಸಂವಿಧಾನವನ್ನು ನೀತಿ ಸಂಹಿತೆ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಏಕೈಕ ಪುಸ್ತಕ ಎಂದು ಬಣ್ಣಿಸುತ್ತಾರೆ ಎಂದರು.* 'ನಯೇ ಭಾರತ್ ಕಾ ಸಂವೇದ್' ಪುಸ್ತಕವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಬರೆದಿದ್ದಾರೆ/ ರಚಿಸಿದ್ದಾರೆ.* ಭಾರತೀಯ ಸಂವಿಧಾನ ಕುರಿತು ನರೇಂದ್ರ ಮೋದಿಯವರ ಭಾಷಾಗಳ ಸಂಕಲನಗಳನ್ನು ಹೊಂದಿರುವಂತಹ ಪುಸ್ತಕವಾಗಿದೆ. ಹಾಗೂ ಇದನ್ನು ಪ್ರಭಾತ್ ಪ್ರಕಾಶನ ಪ್ರೈವೇಟ್ ಲಿಮಿಟೆಡ್ ಪುಸ್ತಕವನ್ನು ಪ್ರಕಟಿಸಿದೆ.