* ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಿಸಿರುವ 2023ರ ಸರಕು ಸಾಗಣೆ ಸೂಚ್ಯಂಕ ಪಟ್ಟಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಚಂಡೀಗಢ ಸೇರಿದಂತೆ ಒಟ್ಟು 13 ರಾಜ್ಯಗಳು ಸ್ಥಾನ ಪಡೆದಿವೆ. * ದೇಶದ ರಫ್ತಿನಲ್ಲಿ ಪ್ರಮುಖ ಪಾತ್ರವಹಿಸುವ ಸರಕು ಸಾಗಣೆ ಕ್ಷೇತ್ರದ ಸಾಮರ್ಥ್ಯಕ್ಕೆ ಈ ಸೂಚ್ಯಂಕ ಕೈಗನ್ನಡಿಯಾಗಿದೆ ಎಂದು  ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಅಭಿಪ್ರಾಯಪಟ್ಟಿದೆ. * ಸಾಧಕರು, ಮಹತ್ವಾಕಾಂಕ್ಷಿಗಳು ಮತ್ತು ವೇಗಿಗಳು ಎಂಬ ಮೂರು ವಿಭಾಗದಲ್ಲಿ ಸರಕು-ಸಾಗಣೆ ಕ್ಷೇತ್ರದಲ್ಲಿ ರಾಜ್ಯಗಳ ಸಾಧನೆಯನ್ನು ಕೇಂದ್ರ ವಿಂಗಡಿಸಿದೆ. * 2022ರಲ್ಲಿ ವೇಗದ ಸಾಗಣೆ ವಿಭಾಗದಲ್ಲಿ ಸ್ಥಾನ ಪಡೆದಿದ್ದ ಸಿಕ್ಕಿಂ ಮತ್ತು ತ್ರಿಪುರಾ ಈ ಬಾರಿ ಬಡ್ತಿ ಪಡೆದು ಸಾಧಕ ಸ್ಥಾನ ಪಡೆದುಕೊಂಡಿದೆ. ಕರ್ನಾಟಕವೂ 'ಸಾಧಕ' ವಿಭಾಗದಲ್ಲಿ ಸ್ಥಾನ ಪಡೆದಿದೆ.