* ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್. 3ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ 'ವರ್ಲ್ಡ್ ಫುಡ್ ಇಂಡಿಯಾ 2023' ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. * ಭಾರತೀಯ ಶ್ರೀಮಂತ ಆಹಾರ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ ನವೆಂಬರ್. 3ರಿಂದ 5ರವರೆಗೆ 3 ದಿನಗಳ 'ವರ್ಲ್ಡ್ ಫುಡ್ ಇಂಡಿಯಾ 2023' ಕಾರ್ಯಕ್ರಮವನ್ನು ಆಯೋಜಿಸಿದೆ.* ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 23 ರಾಜ್ಯಗಳು ಮತ್ತು ವಿವಿಧ ದೇಶಗಳ 1200ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿ ಅನಿತಾ ಪ್ರವೀಣ್ ಅವರು ತಿಳಿಸಿದ್ದಾರೆ.* ಜಾಗತಿಕ ಮೆಗಾ ಫುಡ್ ಈವೆಂಟ್‌ನ 2ನೇ ಆವೃತ್ತಿಯಾದ 'ವರ್ಲ್ಡ್ ಫುಡ್ ಇಂಡಿಯಾ 2023' ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಸುಮಾರು 88 ದೇಶಗಳ ಪ್ರತಿನಿಧಿಗಳು ಹಾಗೂ 6 ದೇಶಗಳ ಸಚಿವರು ಕೂಡ ಆಗಮಿಸಲಿದ್ದಾರೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಪಶುಪತಿ ಕುಮಾರ್‌ ಪರಾಸ್ ಅವರು ತಿಳಿಸಿದ್ದಾರೆ.* ಈ ಕಾರ್ಯಕ್ರಮದ ವಿಶೇಷವೆಂದರೆ ವಿಶ್ವದ ಅತಿ ಉದ್ದದ ದೋಸೆಯನ್ನು ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸುವದಾಗಿದ್ದು, 60 ರಿಂದ 80 ಬಾಣಸಿಗರು ಸೇರಿ 100 ಅಡಿ ಉದ್ದದ ರಾಗಿ ದೋಸೆಯನ್ನು ತಯಾರಿಸಲಿದ್ದಾರೆ.