* ನವಜಾತ ಶಿಶುವಿನ ಸುರಕ್ಷತೆ ಮತ್ತು ಸರಿಯಾದ ಆರೈಕೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 07 ರಂದು  ಶಿಶು ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. * 1990 ರ ವೇಳೆಯಲ್ಲಿ ನವಜಾತ ಶಿಶುಗಳ ಸರಿಯಾದ ಆರೈಕೆ ಮತ್ತು ರಕ್ಷಣೆಯ ಬಗೆಗಿನ ಅರಿವಿನ ಕೊರತೆಯಿಂದಾಗಿ ಸುಮಾರು 5 ಮಿಲಿಯನ್ ಶಿಶುಗಳು ಸಾವನ್ನಪ್ಪಿದವು. ಈ ಘಟನೆ ಶಿಶುಗಳ ಆರೋಗ್ಯ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಶಿಶು ಮರಣ ದರ ಪ್ರಮಾಣವನ್ನು (IMR) ಕಡಿಮೆ ಮಾಡಲು ಹಲವು ದೇಶಗಳನ್ನು ಪ್ರೇರೇಪಿಸಿತು. ಈ ನಿಟ್ಟಿನಲ್ಲಿ ಯುರೋಪ್ ಮೊದಲ ಬಾರಿಗೆ ನವಜಾತ ಶಿಶುಗಳ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ  ಅಭಿಯಾನವನ್ನು ಪ್ರಾರಂಭಿಸಿತು. ನಂತರ ಶಿಶು ಆರೈಕೆ, ಆರೋಗ್ಯ ರಕ್ಷಣಾ  ಸೇವೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಶಿಶು ಮರಣ ದರ ಪ್ರಮಾಣವನ್ನು ಕಡಿಮೆ ಮಾಡಲು ಶಿಶು ಸಂರಕ್ಷಣಾ ದಿನವನ್ನು ಸ್ಥಾಪಿಸಲಾಯಿತು.* ಆರೋಗ್ಯ ವೃತ್ತಿಪರರರು, ಸರ್ಕಾರಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ವಿಶ್ವದಾದ್ಯಂತ ಶಿಶು ಮರಣ ದರ ಪ್ರಮಾಣವನ್ನು ಕಡಿಮೆ ಮಾಡಲು ಉತ್ತಮ ಆರೋಗ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ  ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರೂಪಿಸಿವೆ.* ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, 2019 ರಲ್ಲಿ ಜನನದ ನಂತರ ಒಂದು ತಿಂಗಳೊಳಗೆ 2.4 ಮಿಲಿಯನ್ ಶಿಶುಗಳು ಸಾವನ್ನಪ್ಪಿವೆ. ಅಲ್ಲದೆ ಪ್ರತಿದಿನ 7000 ಕ್ಕಿಂತ ಹೆಚ್ಚು ಶಿಶುಗಳು  ಮರಣಹೊಂದುತ್ತಿವೆ. ಹಾಗೂ  5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣವು 47% ರಷ್ಟಿದೆ. ಆದ್ದರಿಂದ ನವಜಾತ ಶಿಶುಗಳ ಆರೈಕೆಯ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯವಾಗಿದೆ.