* ಕೇಮನ್ ದ್ವೀಪದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಫೆಡರೇಶನ್ (WBF) ಸೂಪರ್ ಫೆದರ್‌ವೇಟ್ ಟೂರ್ನಿಯಲ್ಲಿ ಭಾರತೀಯ ವೃತ್ತಿಪರ ಬಾಕ್ಸರ್ ಮಂದೀಪ್ ಜಾಂಗ್ರಾ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದಾರೆ. ಇವರು ಫೈನಲ್‌ ಸುತ್ತಿನ ಕಾದಾಟದಲ್ಲಿ ಬ್ರಿಟನ್‌ನ ಕಾನರ್ ಮೆಕಿಂತೋಷ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.* ಮಂದೀಪ್ ಜಾಂಗ್ರಾ ವೃತ್ತಿ ಜೀವನದಲ್ಲಿ ಇದುವರೆಗೆ ಕೇವಲ ಒಂದು ಸೋಲನ್ನು ಮಾತ್ರ ಅನುಭವಿಸಿದ್ದಾರೆ. ಮಾಜಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರಾಯ್ ಜೋನ್ಸ್ ಜೂನಿಯರ್ ಅವರ ಅಡಿಯಲ್ಲಿ ತರಬೇತಿಯನ್ನು ಮಂದೀಪ್ ಪಡೆಯುತ್ತಿದ್ದಾರೆ. * ಫೈನಲ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಮಂದೀಪ್ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಅಲ್ಲದೆ ಹೆಚ್ಚಿನ ಸುತ್ತುಗಳಲ್ಲಿ ಬ್ರಿಟಿಷ್ ಆಟಗಾರನ ವಿರುದ್ಧ ಮೇಲುಗೈ ಸಾಧಿಸಿದರು.* ಮಂದೀಪ್ ಆರಂಭದಿಂದಲೂ ಶಕ್ತಿಯುತ ಪಂಚ್‌ಗಳನ್ನು ಪ್ರಯೋಗಿಸುತ್ತ, 10 ಸುತ್ತುಗಳ ಉದ್ದಕ್ಕೂ ತಮ್ಮ ಬಲವನ್ನು ಕಾಯ್ದುಕೊಂಡರು. ಇನ್ನೊಂದೆಡೆ ಬ್ರಿಟನ್‌ ಬಾಕ್ಸರ್‌ ವೇಗವನ್ನು ಪಡೆದುಕೊಳ್ಳಲು ಹೆಣಗಾಟ ನಡೆಸಿದರು. * ಕಾನರ್ ಮೆಕಿಂತೋಷ್ ಪುಟಿದೇಳುವ ಸೂಚನೆ ನೀಡಿದರೂ ಸಹ ಫಲಿಸಲಿಲ್ಲ. ಏಳು ನಾಕೌಟ್ ಗೆಲುವುಗಳು ಸೇರಿದಂತೆ ಮಂದೀಪ್ ಜಾಂಗ್ರಾ ಇದುವರೆಗೆ ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ 12 ಪಂದ್ಯಗಳಲ್ಲಿ 11 ಗೆದ್ದಿದ್ದಾರೆ. ಭಾರತದ ಭರವಸೆಯ ಬಾಕ್ಸರ್‌ ಮಂದೀಪ್ 2014 ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದು ಬೀಗಿದ್ದಾರೆ.