Job Description: * ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹಗಳನ್ನು ನಿರ್ಮಿಸುವ ಸಲುವಾಗಿ ನೇಪಾಳದಿಂದ ವಿಶೇಷ ಶಿಲೆಗಳು ಉತ್ತರ ಪ್ರದೇಶದ ಅಯೋಧ್ಯೆಗೆ ಫೆ. 01 ರಂದು ತಲುಪಿದವು.* ಈ ಶಿಲೆಗಳಿಂದ ತಯಾರಿಸಲಾಗಿರುವ ವಿಗ್ರಹವನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. * ಶಿಲೆಗಳು 6 ಕೋಟಿ ವರ್ಷಗಳ ಹಳೆಯ ಶಿಲೆಗಳಾಗಿದ್ದು, ಇವು ನೇಪಾಳದ ಸಾಲಿಗ್ರಾಮ ಬಳಿ ಗಂಡಕಿ ನದಿಯಲ್ಲಿ ದೊರೆತಿವೆ. ಒಂದು ಶಿಲೆ 26 ಟನ್ ತೂಕ ಹೊಂದಿದ್ದು, ಮತ್ತೊಂದು ಶಿಲೆಯು 14 ಟನ್ ತೂಕವಿದೆ.