* ಭಾರತದಿಂದ ಸಮುದ್ರ ಮಾರ್ಗದ ಮೂಲಕ ನೆದರ್ಲೆಂಡ್ಸ್ ಗೆ ಪ್ರಾಯೋಗಿಕವಾಗಿ ಬಾಳೆಹಣ್ಣು ರಫ್ತು ಮಹಿವಾಟು ಯಶಸ್ವಿಯಾಗಿದೆ.* ಬೆನ್ನಲ್ಲೇ ಮಾವಿನ ಹಣ್ಣು, ದಾಳಿಂಬೆ ಹಾಗೂ ಹಲಸಿನ ಹಣ್ಣಿನ ರಷ್ಟಿಗೂ ಉತ್ತೇಜನ ನೀಡಲು ಕೇಂದ್ರ ವಾಣಿಜ್ಯ ಸಚಿವಾಲಯ ನಿರ್ಧರಿಸಿದೆ.* ಮಹಾರಾಷ್ಟ್ರದ ಬಾರಾಮತಿಯಿಂದ ಬಾಳೆಹಣ್ಣನ್ನು ಹೊತ್ತ ಹಡಗು ಡಿಸೆಂಬರ್ 5ರಂದು ನೆದರ್ಲೆಂಡ್‌ನ ರೋಟರ್ ಡ್ಯಾಮ್ ನಗರಕ್ಕೆ ತಲುಪಿದೆ. ಇನ್ನು ಮುಂದೆ ಹಡಗಿನ ಮೂಲಕ ಹಣ್ಣುಗಳ ರಫ್ತು ಸುಗಮವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. * ಸಮುದ್ರ ಮಾರ್ಗದ ಮೂಲಕ ಹಂತ ಹಂತವಾಗಿ ಈ ಹಣ್ಣುಗಳ ರಫ್ತು ಪ್ರಮಾಣ ಹೆಚ್ಚಿ- ಸಲಾಗುತ್ತದೆ. ಜಲ ಮಾರ್ಗದ ಅವಧಿ, ಹಣ್ಣುಗಳ ಕೊಯ್ಲು, ಅವುಗಳನ್ನು ವೈಜ್ಞಾನಿಕವಾಗಿ ಮಾಗಿಸುವಿಕೆಗೆ ಸಂಬಂಧಿಸಿದಂತೆ ರೈತರಿಗೆ ತರಬೇತಿಯನ್ನೂ ನೀಡಲಾಗುತ್ತದೆ ಎಂದು ಕೆಂಡ ವಾಣಿಜ್ಯ ಸಚಿವಾಲಯ ತಿಳಿಸಿದೆ ಹೇಳಿದೆ.* ಮುಂದಿನ ಐದು ವರ್ಷಗಳಲ್ಲಿ ತಾಜಾ ಬಾಳೆಹಣ್ಣಿನ ರಫ್ತು ವಹಿವಾಟನ್ನು ₹8,300 ಕೋಟಿಗೆ ಹೆಚ್ಚಿಸಲು ಸಚಿವಾಲಯ ತೀರ್ಮಾನಿಸಿದೆ.* ಭಾರತವು ವಿಶ್ವದಲ್ಲಿಯೇ ಅತಿಹೆಚ್ಚು ಬಾಳೆಹಣ್ಣು ಉತ್ಪಾದಿಸುವ ರಾಷ್ಟ್ರವಾಗಿದೆ. ವಿಶ್ವದ ಉತ್ಪಾದನೆಯಲ್ಲಿ ಶೇ 26.45ರಷ್ಟು ಪಾಲು ಹೊಂದಿದೆ. ಭಾರತದಲ್ಲಿ ವಾರ್ಷಿಕವಾಗಿ 35.36 ದಶಲಕ್ಷ ಟನ್‌ನಷ್ಟು ಉತ್ಪಾದನೆಯಾಗುತ್ತದೆ.* ದೇಶದಲ್ಲಿ ಅತಿಹೆಚ್ಚು ಬಾಳೆಹಣ್ಣುಗಳನ್ನು ಉತ್ಪಾದಿಸುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಉಳಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಅತಿಹೆಚ್ಚಾಗಿ ಬಾಳೆಹಣ್ಣು ಉತ್ಪಾದನೆಯಾಗುತ್ತದೆ.