* ಕರ್ನಾಟಕ ರಾಜ್ಯ ಸರ್ಕಾರ ನೀಡುವ 2022–23 ಮತ್ತು 2023–24ನೇ ಸಾಲಿನ 'ಜಾನಪದ ಶ್ರೀ ಪ್ರಶಸ್ತಿ', 'ಜಕಣಾಚಾರಿ ಪ್ರಶಸ್ತಿ' ಹಾಗೂ 'ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ'ಗೆ ಎಂಟು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಾಂಸ್ಕೃತಿಕ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.ಈ ಪ್ರಶಸ್ತಿಗೆ ಕಲಾವಿದ ಕಾಳೆ ಅವರ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಿದೆ.   * ಪ್ರಶಸ್ತಿಗಳು ಮತ್ತು ಆಯ್ಕೆಯಾದವರು :- ಜಕಣಾಚಾರಿ ಪ್ರಶಸ್ತಿ : ಕಬುರಗಿಯ ಮಹದೇವಪ್ಪ ಎಲ್.ಶಿಲ್ಪಿ, ಮತ್ತು ಚಿಕ್ಕಮಗಳೂರಿನ ಎಸ್. ಪಿ. ಜಯಣ್ಣಾಚಾರ್ ಆಯ್ಕೆಯಾಗಿದ್ದಾರೆ .- ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ : ಮೈಸೂರಿನ ಜಿ.ಎಲ್.ಎನ್. ಸಿಂಹ ಮತ್ತು ಕಲಬುರಗಿಯ ಬಸವರಾಜ ಎಲ್.ಜಾನೆ ಆಯ್ಕೆಯಾಗಿದ್ದಾರೆ.- ಜಾನಪದ ಶ್ರೀ ಪ್ರಶಸ್ತಿ : ದಕ್ಷಿಣಕನ್ನಡ ಕೊರಗಪ್ಪ ಶೆಟ್ಟಿ (ಯಕ್ಷಗಾನ), ಬೀದರ್ ನ ಕಲ್ಲಪ್ಪ ಮಿರ್ಜಾಪುರ್(ರಿವಾಯತ್ ಪದಗಳು), ಚಿಕ್ಕಮಗಳೂರಿನ ಜಿ.ಪಿ.ಜಗದೀಶ್ (ವೀರಗಾಸೆ) ಮತ್ತು ಚಿತ್ರದುರ್ಗದ ಹಲಗೆ ದುರ್ಗಮ್ಮ (ಹಲಗೆ ವಾದನ, ಲಮಾಣಿ ಪದಗಳು) ಆಯ್ಕೆಯಾಗಿದ್ದಾರೆ.     * ಈ ಪ್ರಶಸ್ತಿಗಳು ಟಾಲಾ 5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿವೆ.* 'ಜಕಣಾಚಾರಿ ಪ್ರಶಸ್ತಿ'ಯನ್ನು ಜ.1ರಂದು ನಡೆಯುವ ವಿಶ್ವಕರ್ಮ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರದಾನ ಮಾಡಲಾಗುವುದು. ಉಳಿದ ಪ್ರಶಸ್ತಿಗಳನ್ನು ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರದಾನ  ಮಾಡಲಾಗುತ್ತದೆ.