* ಡಿಸೆಂಬರ್ 26, 2023 ರಂದು ಐ ಎನ್ ಎಸ್ ಇಂಪಾಲ್ ( INS - Imphal Pennat D68 ), ವಿಶಾಖಪಟ್ಟಣಂ ಕ್ಲಾಸ್ ಸ್ಟೇಲ್ತ್ ಗೈಡೆಡ್ ಕ್ಷಿಪಣಿ ವಿದ್ವಂಸಕಗಳ ಮೂರನೇ ನೌಕೆಯನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಲು ನಿರ್ಧರಿಸಲಾಗಿದೆ.* ಪ್ರಾಜೆಕ್ಟ್ 15 ಬಿ ಭಾಗವಾಗಿ, ಈ ವರ್ಗವು ಸ್ಥಳೀಯ ಆಧುನಿಕ ತಂತ್ರಜ್ಞಾನವನ್ನು ಪ್ರತಿನಿಧಿಸುತ್ತದೆ.* ಪ್ರಾಜೆಕ್ಟ್ 15 ಬಿ ಒಪ್ಪಂದವನ್ನು ಜನವರಿ ೧೧ರಲ್ಲಿ ಸಹಿ ಮಾಡಲಾಯಿತು.* ಐಎನ್ಎಸ್ ಇಂಪಾಲ್ ನ ನಿರ್ಮಾಣದ ಪ್ರಾರಂಭವು 17ನೇ ಮೇ 2017 ರಂದು ನಡೆಯಿತು. ಯಾರ್ಡ್ 12706 ಅನ್ನು INS ಇಂಪಾಲ್ ಎಂದು ಗುರುತಿಸಲಾಗಿದೆ. ಈ ಹಡಗನ್ನು ಏಪ್ರಿಲ್ 20 2019 ರಂದು ಸಮುದ್ರದ ಪ್ರಯೋಗಗಳಿಗೆ ಒಳಗಾಯಿತು  ಮತ್ತು ಅಕ್ಟೋಬರ್ 26ರಂದು ವಿತರಣೆ ಹಾಗೂ ಡಿಸೆಂಬರ್ 26ರಂದು ಕಾರ್ಯಾ ಆರಂಭ ನಡೆಯಿತು.* ವಿಶಾಖಪಟ್ಟಣ ಕ್ಲಾಸ್ ಡೆಸ್ಟ್ರಾಯರ್ ಗಳ ವಿಶೇಷತೆಗಳನ್ನು ನೋಡುವುದಾದರೆ, 163 ಮೀಟರ್ ಉದ್ದ 14 ಮೀಟರ್ ಅಗಲ ಹಾಗೂ 7,400 ಟನ್ ಗಳನ್ನು ಸ್ಥಳಾಂತರಿಸುವ ಸಾಮರ್ಥ್ಯ ಹೊಂದಿದೆ.* ನೌಕಾ ಕಾರ್ಯಾಚರಣೆಯಲ್ಲಿ ವಿದ್ವಾಂಸಕಗಳ ಹೆಚ್ಚಿನ ವೇಗ ಕುಶಲತೆ ಮತ್ತು ಸಹಿಷ್ಣುತೆ ಹೊಂದಿರುವ ನೌಕಾ ರಚನೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.* ವಿಶಾಖಪಟ್ಟಣಂ ವರ್ಗವು - ಸ್ವತಂತ್ರ ಅಕ್ರಮಣಕಾರಿ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿದ್ದು, ನೆಟ್ವರ್ಕ್ ಕೇಂದ್ರಿತ ಯುದ್ಧ ತಂತ್ರಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.