* ಭಾರತದಲ್ಲಿಯೇ ಕಾರುಗಳ ಸುರಕ್ಷತೆಯನ್ನು ಅಳೆಯುವ 'ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ'ಗೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ.* ಈ ಮೂಲಕ ಸ್ವಂತ ಎನ್‌ಸಿಎಪಿ ಹೊಂದಿದ ರಾಷ್ಟ್ರಗಳಾದ ಜಪಾನ್, ಆಸ್ಟ್ರೇಲಿಯಾ, ಅಮೆರಿಕ, ಲ್ಯಾಟಿನ್ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. * ಆನ್‌ ಲೈನ್‌ನಲ್ಲಿ ಮೊಬೈಲ್ ಸೇರಿ ಯಾವುದೇ ಉತ್ಪನ್ನಗಳ ರೇಟಿಂಗ್ ಆಧಾರದ ಮೇಲೆ ಖರೀದಿಸುವ ರೀತಿಯಲ್ಲಿಯೇ ಭಾರತ್' ಎನ್‌ಸಿಎಪಿ ನೀಡುವ ರೇಟಿಂಗ್ ಆಧಾರದ ಮೇಲೆಯೇ ಕಾರುಗಳನ್ನು ಖರೀದಿಸಲು ಜನರಿಗೆ ಅನಕೂಲವಾಗಲಿದೆ.