* ಗಡಿಯಲ್ಲಿ ಚೀನಾ ಜೊತೆಗಿನ ಉದ್ವಿಗ್ನ ಸ್ಥಿತಿಯ ನಡುವೆಯೇ ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ತನ್ನ ವ್ಯಾಪ್ತಿಯ ಹಿಂದೂ ಮಹಾಸಾಗರದಲ್ಲಿ ಯುದ್ಧವಿಮಾನಗಳ ನೌಕಾವಾಹಕಗಳಾದ 'ಐಎನ್‌ಎಸ್ ವಿಕ್ರಮಾದಿತ್ಯ' ಮತ್ತು 'ಐಎನ್‌ಎಸ್ ವಿಕ್ರಾಂತ್' ಒಳಗೊಂಡಂತೆ ಪೂರ್ಣಪ್ರಮಾಣದ ಅಭ್ಯಾಸ ಕಾರ್ಯಾಚರಣೆ ನಡೆಸಲಾಯಿತ್ತು.* ಮಿಗ್-29ಕೆ ಯುದ್ಧ ವಿಮಾನಗಳು, ಹೊಸದಾಗಿ ವಾಯುಪಡೆಗೆ ಸೇರಿರುವ ಎಂಎಚ್‌60ಆರ್ ಬಳಕೆಯಲ್ಲಿರುವ ಕಾಮೊವ್, ಸೀ ಕಿಂಗ್, ಚೇತಕ್‌, ದೇಶೀಯವಾಗಿ ತಯಾರಿಸಲಾದ ಹಗುರ ಯುದ್ಧವಿಮಾನ ಒಳಗೊಂಡಂತೆ ಸುಮಾರು 35 ಯುದ್ಧ ವಿಮಾನಗಳನ್ನು ಹೊತ್ತ ಎರಡೂ ನೌಕಾವಾಹಕಗಳು ಸಮುದ್ರದಲ್ಲಿ ಸಂಚರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತ್ತು.* ಸಮರಾಭ್ಯಾಸವು ಭಾರತೀಯ ನೌಕಾಪಡೆಯ ಕಡಲ ಭದ್ರತೆಯನ್ನು ಹೆಚ್ಚಿಸುವ ಮತ್ತು ಹಿಂದೂ ಮಹಾಸಾಗರ ಹಾಗೂ ಸಾಮರ್ಥ್ಯ ಪ್ರದರ್ಶನದ ದಿಸೆಯಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ' ಎಂದು ಭಾರತೀಯ ನೌಕಾಪಡೆಯ ವಕ್ತಾರ, ಕಮಾಂಡರ್ ವಿವೇಕ್ ಮಧ್ವಲ್‌ ರವರು ತಿಳಿಸಿದ್ದಾರೆ.