* ಭಾರತದ ಅತಿ ದೊಡ್ಡ ರಾಕೆಟ್ ಎನಿಸಿರುವ 'ಎಲ್ ವಿಎಂ-3 ' ಅತ್ಯಂತ ಭಾರವಾದ ಉಡಾವಣಾ ವಾಹನ ರಾಕೆಟ್ ಮೂಲಕ ದೈತ್ಯ ಗಾತ್ರದ 'ಸಿಎಂಎಸ-3 'ಸವಂಹಣ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜಾಗಿದೆ ಮತ್ತು ಇದುಅಕ್ಟೋಬರ್ 26 ,2025 ರಂದು ನಿರ್ಮಾಣವಾಗಿದೆ.ಪ್ರಸ್ತುತ ರಾಕೆಟ್ ನವಂಬರ್ 2 ರಂದು ಉಡಾವಣೆಗೊಳ್ಳಲಿದೆ.* ರಕ್ಷಣಾ ಸಚಿವಾಲಯದ 1589 ಕೋಟಿ ರೂಪಾಯಿಗಳ ಹೂಡಿಕೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉಪಗ್ರಹವನ್ನು ಭಾರತೀಯ ನೌಕಾಪಡೆಯ ಬಳಕೆಗಾಗಿಯೇ ನಿರ್ಮಿಸಲಾಗಿದೆ.* ಇದು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ,2013 ರಲ್ಲಿ ಉಡಾವಣೆಗೊಳಿಸಲಾದ ಜಿಸ್ಯಾಟ್-7 ಉಪಗ್ರಹದ ಬದಲಿಗೆ ಕಾರ್ಯಾಚರಿಸಲಿದೆ.* ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ನವೇಂಬರ 2 ರಂದು 4,400 ಕೆಜಿ ತೂಕದ ಸ್ಯಾಟಲೈಟ್ ಉಡಾವಣೆಗೊಳ್ಳಲಿದೆ.* ಇಸ್ರೋ ತಂಡವು ಅಂತಿಮ ಹಂತದ ತಯಾರಿ ನಡೆಸಲಿದೆ ಮತ್ತು ಭಾರತದ ನೆಲದಿಂದ ಉಡಾವಣೆಗೊಳ್ಳುತ್ತಿರುವ ಅಂತ್ಯಂತ ಭಾರವಾದ ಉಪಗ್ರಹ ಇದಾಗಿದೆ ಎಂಬುದು ವಿಶೇಷ.* ಈ ಮೊದಲು ಜಿಎಸಎಲ್ ವಿ ಎಂಕೆ 3 ಎಂದು ಕರೆಯಲ್ಪಡುತ್ತಿದ್ದ ಎಲ್ ವಿಎಂ 3 ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಅಂತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ.ಇದು 43 .5 ಮೀಟರ ಎತ್ತರ ಮತ್ತು 640 ಟನಗಳ ಉಡಾವಣಾ ತೂಕವನ್ನು ಹೊಂದಿರುವ ರಾಕೆಟ್ ಮೂರೂ ಹಂತಗಳ ವಿನ್ಯಾಸ ವನ್ನು ಹೊಂದಿದೆ.* ಇಸ್ರೋದ ನಂಬಿಗಸ್ಥ ಕುದುರೆ ಎಣಿಸಿದ ಶಕ್ತಿಶಾಲಿ ಎಲ್ ವಿಎಂ ರಾಕೆಟನ ಐದನೇ ಕಾರ್ಯಾಚರಣೆ ಇದಾಗಿರುವ ಕಾರಣ 'ಈ ಮಿಷನಗೆ 'ಎಲ್ ವಿಎಂ -3 ಎಂದು ಹೆಸರಿಡಲಾಗಿದೆ.* 2023 ರಲ್ಲಿ 'ಚಂದ್ರಯಾನ - 3 ' ಯೋಜನೆಗೆ ಈ ರಾಕೆಟ್ ಅನ್ನು ಬಳಸಲಾಗಿತ್ತು.ದೇಶಿಯ ಹಾಗೂ ವಾಣಿಜ್ಯದ ಉದ್ದೇಶದ ಕಾರ್ಯಾಚರಣೆಗಳಿಗೆ  ಇಸ್ರೋ ಇದನ್ನು ಬಳಸಿಕೊಳ್ಳುತ್ತಿದೆ.* ಈ ಉಪಗ್ರಹದ ಯೋಜನೆ ಭಾರತದ ಬಾಹ್ಯಾಕಾಶ ಸಂವಹನಾ ಮಹತ್ವಕಾಂಶಗಳಲ್ಲಿ ಮಹತ್ವದ ಹೆಜ್ಜೆಯಾಗಿದ್ದು,ರಾಷ್ಟ್ರಿಯ ಭದ್ರತೆ,ತಂತ್ರಜ್ಞಾನ ಮತ್ತು ನಾವಿನ್ಯತೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಿದೆ.* ಉಪಗ್ರಹವನ್ನು ಜಿಯೋಸಿಂಕ್ರೋನಸ ಟ್ರಾನ್ಸ್ಪರ ಕಕ್ಷೆಗೆ ಸೇರಿಸುವ ಗುರಿಯೊಂದಿಗೆ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಲಿದೆ.